Webdunia - Bharat's app for daily news and videos

Install App

ಸ್ಮರಣೀಯ ಕ್ಷಣ: ರಾಹುಲ್ ಜತೆಗಿದ್ದ 10 ವರ್ಷಗಳ ಹಳೆಯ ಫೋಟೊ ಶೇರ್ ಮಾಡಿದ ಕೊಹ್ಲಿ

Webdunia
ಬುಧವಾರ, 3 ಆಗಸ್ಟ್ 2016 (17:21 IST)
ಭಾರತದ ಟೆಸ್ಟ್ ನಾಯಕರಾದ ಮೇಲೆ ವಿರಾಟ್ ಕೊಹ್ಲಿ ತಪ್ಪು ಹೆಜ್ಜೆಯನ್ನು ಇಟ್ಟಿಲ್ಲ. ಮುಂಚೂಣಿಯಲ್ಲಿ ನಿಂತು ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಈಗ ವಿಂಡೀಸ್ ತಂಡವನ್ನು ಸೋಲಿಸುವ ಸನಿಹದಲ್ಲಿದ್ದಾರೆ. ಕಿಂಗ್‌ಸ್ಟನ್‌ನಲ್ಲಿ ನಾಲ್ಕನೇ ದಿನ ವಾಷ್‌ಔಟ್ ಆದ ಬಳಿಕ, ವಿರಾಟ್ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂಗೆ ಸ್ಮರಣೀಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
 
ಚಿತ್ರದಲ್ಲಿ ವಿರಾಟ್ ಮತ್ತು ಕೆಲವು ಯುವ ಕ್ರಿಕೆಟಿಗರು ರಾಹುಲ್ ದ್ರಾವಿಡ್ ಜತೆಗಿದ್ದು, ಆ ಸಂದರ್ಭದಲ್ಲಿ ರಾಹುಲ್  ಭಾರತ ತಂಡದ ಪ್ರಮುಖ ಆಟಗಾರರಾಗಿದ್ದರು. ವಿರಾಟ್ ಜೂನಿಯರ್ ಕ್ರಿಕೆಟರ್‌ ಆಗಿದ್ದಾಗ 10 ವರ್ಷಗಳ ಹಿಂದೆ ತೆಗೆದ ಚಿತ್ರವಾಗಿತ್ತು. 
 
ಇಂತಹ ಕ್ಷಣಗಳು ನಿಮ್ಮನ್ನು ನಂಬುವಂತೆ ಮಾಡುತ್ತದೆ. ಈ ಲೆಜೆಂಡ್ ಜತೆ ನಾನು ಒಂದೊಮ್ಮೆ ಕಣ್ಣಿನ ಸಂಪರ್ಕ ಹೊಂದಲು ಪ್ರಯತ್ನಿಸಿದ್ದೆ. ಬಳಿಕ ಅದೇ ಲೆಜೆಂಡ್‌ ಟೆಸ್ಟ್ ಕ್ರಿಕೆಟ್ ಆಡುವಾಗ ನನ್ನ ಸಂದರ್ಶನ ಮಾಡಿದರು. ಕನಸುಗಳು ನಿಜವಾಗುತ್ತದೆಂದು ನಾನು ಊಹಿಸಿದ್ದೇನೆ. ಸದಾ ನಿಮ್ಮ ಮೇಲೆ ನೀವು ನಂಬಿಕೆ ಇರಿಸುವುದನ್ನು ಮಾತ್ರ ನೀವು ಮಾಡಿ ಎಂದು ಕೊಹ್ಲಿ ಹೇಳಿದ್ದಾರೆ.
 
ವಿರಾಟ್ ಕೊಹ್ಲಿ ಅವರ ಪೋಸ್ಟ್ ಅನೇಕ ಭರವಸೆಯ ಕ್ರಿಕೆಟರುಗಳಿಗೆ ಪ್ರೇರಣೆಯಾಗಿದೆ. ದೆಹಲಿ ಯುವಕ 10 ವರ್ಷಗಳ ಅವಧಿಯಲ್ಲೇ ಭಾರತದ ಕ್ರಿಕೆಟ್‌ನ ಪ್ರಖ್ಯಾತ ಆಟಗಾರರಾಗಿ ಹೊರಹೊಮ್ಮಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

ಪಾಕಿಸ್ತಾನ ಕ್ರಿಕೆಟಿಗರ ಚಾನೆಲ್ ಭಾರತದಲ್ಲಿ ಒಮ್ಮೆ ಆನ್, ಮತ್ತೆ ಆಫ್

ಶುಭಮನ್‌ ಗಿಲ್‌ ಡಬಲ್‌ ಸೆಂಚುರಿ ಬೆನ್ನಲ್ಲೇ ಆಂಗ್ಲರ ಗಾಯಕ್ಕೆ ಉಪ್ಪು ಸವರಿದ ಆಕಾಶ್‌ ದೀಪ್‌: ಭಾರತಕ್ಕೆ ಬೃಹತ್‌ ಮುನ್ನಡೆ

IND vs ENG: ತಪ್ಪು ತಿದ್ದಿಕೊಂಡು ಮೊದಲ ಇನಿಂಗ್ಸ್ ನಲ್ಲಿ ದೊಡ್ಡ ಮೊತ್ತ ಪೇರಿಸಿದ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments