Publish Date: Sun, 28 Aug 2022 (09:20 IST)
Updated Date: Sun, 28 Aug 2022 (09:30 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಇಲ್ಲಿ ಗೆಲುವಿನ ಲೆಕ್ಕಾಚಾರಕ್ಕಿಂತ ತಂಡಗಳು ಟಾಸ್ ಗೆಲ್ಲುವುದನ್ನೇ ಗುರಿಯಾಗಿಟ್ಟುಕೊಳ್ಳುವುದು ಮುಖ್ಯ. ಯಾಕೆಂದರೆ ಇಲ್ಲಿನ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವುದೇ ತಂಡಗಳ ಗುರಿಯಾಗಿರುತ್ತದೆ.
ಟಾಸ್ ಗೆದ್ದವರೇ ಹೆಚ್ಚಾಗಿ ಪಂದ್ಯವನ್ನೂ ಗೆಲ್ಲುತ್ತಾರೆ. ಇದಕ್ಕೆ ಐಪಿಎಲ್ 2021 ರ ಬಹುತೇಕ ಪಂದ್ಯಗಳು ಸಾಕ್ಷಿ. ಹೀಗಾಗಿ ಈ ಮೈದಾನದಲ್ಲಿ ಇಂದು ರೋಹಿತ್ ಪಡೆಗೆ ಟಾಸ್ ಗೆದ್ದರೆ ಅರ್ಧ ಪಂದ್ಯ ಗೆದ್ದಂತೆ.