Publish Date: Sat, 27 Aug 2022 (18:54 IST)
Updated Date: Sat, 27 Aug 2022 (18:56 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ನಾಳೆ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪಾಕ್ ನಾಯಕ ಬಾಬರ್ ಅಜಮ್ ಪರಸ್ಪರ ಭೇಟಿಯಾಗಿದ್ದಾರೆ.
ಉಭಯ ತಂಡಗಳು ಒಂದೇ ಕಡೆ ಅಭ್ಯಾಸ ನಡೆಸುತ್ತಿವೆ. ಹೀಗಾಗಿ ಕಳೆದ ಎರಡು ದಿನಗಳಿಂದ ಉಭಯ ತಂಡಗಳ ಆಟಗಾರರು ಪರಸ್ಪರ ಭೇಟಿಯಾಗುತ್ತಲೇ ಇದ್ದಾರೆ.
ನಾಳೆ ಪಂದ್ಯಕ್ಕೆ ಮುನ್ನ ಅಭ್ಯಾಸ ನಡೆಸಲು ಬಂದ ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಕೆಲ ಹೊತ್ತು ಔಪಚಾರಿಕವಾಗಿ ಮಾತನಾಡಿ ಹಗುರವಾಗಿದ್ದಾರೆ. ಭಾರತ-ಪಾಕಿಸ್ತಾನವೆಂದರೆ ಸಹಜವಾಗಿಯೇ ಎರಡೂ ತಂಡಗಳ ನಡುವೆ ಒತ್ತಡ ಹೆಚ್ಚಾಗಿರುತ್ತದೆ.