Publish Date: Sat, 27 Aug 2022 (09:40 IST)
Updated Date: Sat, 27 Aug 2022 (09:50 IST)
ದುಬೈ: ಪಾಕಿಸ್ತಾನದ ವಿರುದ್ಧ ನಾಳೆಯ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೆ ಮುನ್ನ ಬಿಸಿಸಿಐ ಪ್ರಮಾದವೊಂದನ್ನು ಎಸಗಿದೆ.
ಬಿಸಿಸಿಐ ಭಾರತೀಯ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ಪ್ರಕಟಿಸಿದ್ದು, ಇದನ್ನು ನೋಡಿದ ನೆಟ್ಟಿಗರಿಗೆ ನಾಳೆ ಆಡಲಿರುವ 10 ಆಟಗಾರರ ಸುಳಿವು ಸಿಕ್ಕಿದೆ.
ಇದನ್ನು ನೋಡಿದರೆ ಸ್ವತಃ ಬಿಸಿಸಿಐಯೇ ಆಡುವ ಬಳಗವನ್ನು ಲೀಕ್ ಮಾಡಿದಂತಾಗಿದೆ. ಒಟ್ಟು 10 ಕ್ರಿಕೆಟಿಗರು ಪ್ರಾಕ್ಟೀಸ್ ಮಾಡುವ ಫೋಟೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಇವರಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಆವೇಶ್ ಖಾನ್, ಅರ್ಷ್ ದೀಪ್ ಸಿಂಗ್, ರಿಷಬ್ ಪಂತ್, ಭುವನೇಶ್ವರ್ ಕುಮಾರ್ ಸೇರಿದ್ದಾರೆ. ಇವರೆಲ್ಲಾ ಆಡುವ ಬಳಗದಲ್ಲಿದ್ದಾರೆ ಎಂಬ ಸುಳಿವನ್ನು ಸ್ವತಃ ಬಿಸಿಸಿಐ ಬಿಟ್ಟುಕೊಟ್ಟಂತಾಗಿದೆ.