ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಎಂದರೆ ವಿರಾಟ್ ಕೊಹ್ಲಿಗೆ ಅಚ್ಚುಮೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಧೋನಿ ನಿವೃತ್ತರಾದರೂ ಈಗಲೂ ಅವರೇ ನನ್ನ ಆಲ್ ಟೈಮ್ ಕ್ಯಾಪ್ಟನ್ ಎಂದು ಕೊಹ್ಲಿ ಹೇಳಿಕೊಂಡಿದ್ದರು. ಕೊಹ್ಲಿ ವೃತ್ತಿಜೀವನಕ್ಕೆ ಸದಾ ಬೆಂಬಲವಾಗಿ ನಿಂತಿದ್ದು ಧೋನಿ. ಈ ಕಾರಣಕ್ಕೆ ಧೋನಿ ಮೇಲೆ ಕೊಹ್ಲಿಗೆ ವಿಶೇಷ ಗೌರವವಿದೆ.
ಇದೀಗ ಧೋನಿ ಜೊತೆಗಿನ ಹಳೆಯ ಜೊತೆಯಾಟದ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೊಹ್ಲಿ, ಈ ವ್ಯಕ್ತಿಯ ಡೆಪ್ಯುಟಿಯಾಗಿ ಕರ್ತವ್ಯ ಮಾಡಿದ್ದು ನನ್ನ ವೃತ್ತಿ ಜೀವನದಲ್ಲಿ ಸದಾ ಅವಿಸ್ಮರಣೀಯ ಮತ್ತು ಖುಷಿ ಕೊಡುವ ಸಂದರ್ಭ. ನಮ್ಮಿಬ್ಬರ ಜೊತೆಯಾಟ ನನಗೆ ಯಾವತ್ತೂ ಸ್ಪೆಷಲ್, 7+18 ಎಂದು ಕೊಹ್ಲಿ ಸ್ಮರಿಸಿದ್ದಾರೆ.