ಮುಂಬೈ: ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗುತ್ತಿದ್ದಂತೇ ವಿರಾಟ್ ಕೊಹ್ಲಿ ನಾಯಕತ್ವದಿಂದ ಹೊರನಡೆದರು. ಇದಕ್ಕೆ ಕಾರಣ ಕೊಹ್ಲಿಗೆ ದ್ರಾವಿಡ್ ಜೊತೆಗೆ ಹೊಂದಾಣಿಕೆ ಸರಿಯಾಗಲ್ಲ ಎನ್ನುವುದಾಗಿತ್ತು ಎಂದು ಪಾಕ್ ಮಾಜಿ ಕ್ರಿಕೆಟಿಗ ದನೇಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಈ ಮೊದಲು ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ಕೊಹ್ಲಿಗೆ ವೈಮನಸ್ಯವಾಗಿತ್ತು. ಈ ಕಾರಣಕ್ಕೆ ಕುಂಬ್ಳೆ ಸ್ಥಾನ ತ್ಯಜಿಸಿದರು. ಕುಂಬ್ಳೆ ಮತ್ತು ದ್ರಾವಿಡ್ ಇಬ್ಬರೂ ದ.ಭಾರತದವರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.
ಇತ್ತ ರವಿಶಾಸ್ತ್ರಿ ಅವಧಿ ಮುಗಿದ ಮೇಲೆ ಸೌರವ್ ಗಂಗೂಲಿ ದ್ರಾವಿಡ್ ರನ್ನು ಕರೆತಂದರು. ದ್ರಾವಿಡ್ ಅಂಡರ್ 19 ತಂಡದಲ್ಲಿದ್ದಿದ್ದ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಕೊಹ್ಲಿ ಎಂತಹ ವ್ಯಕ್ತಿ ಎಂದರೆ ತಮಗೆ ಅನಿಸಿದ್ದನ್ನು ಮಾಡಿಯೇ ಮಾಡುತ್ತಾರೆ. ಆದರೆ ದ್ರಾವಿಡ್ ಶೈಲಿ ಅವರಿಗೆ ಬಹುಶಃ ಇಷ್ಟವಿರಲಿಲ್ಲ. ಹೀಗಾಗಿ ಅವರು ನಾಯಕತ್ವ ತ್ಯಜಿಸಿರಬಹುದು ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.