ಮುಂಬೈ: ಟೀಂ ಇಂಡಿಯಾ ಏಷ್ಯಾ ಕಪ್ ತಂಡದಿಂದ ಜಸ್ಪ್ರೀತ್ ಬುಮ್ರಾ ಗಾಯಗೊಂಡು ಹೊರಗುಳಿದಿದ್ದರೆ, ಇನ್ನೊಬ್ಬ ವೇಗಿ ಮೊಹಮ್ಮದ್ ಶಮಿಗೆ ಅವಕಾಶವೇ ನೀಡಿರಲಿಲ್ಲ. ಈ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. ಇದರ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಬುಮ್ರಾ, ಶಮಿ ಶಾಶ್ವತವಾಗಿ ತಂಡದಲ್ಲಿರಲ್ಲ. ಹೀಗಾಗಿ ನಾವು ಯುವ ವೇಗಿಗಳನ್ನು ತಯಾರು ಮಾಡಬೇಕಾಗುತ್ತದೆ ಎಂದು ರೋಹಿತ್ ಹೇಳಿದ್ದಾರೆ.
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿಗೆ ಸದಾ ತಂಡದಲ್ಲಿರಲು ಸಾಧ್ಯವಾಗಲ್ಲ. ಹೀಗಾಗಿ ನಾನು ರಾಹುಲ್ ಭಾಯಿ (ದ್ರಾವಿಡ್) ಯುವ ವೇಗಿಗಳನ್ನು ತಯಾರು ಮಾಡಲು ಯೋಜನೆ ರೂಪಿಸಿದ್ದೇವೆ. ನಾವು ಈಗ ಆಡುವ ಕ್ರಿಕೆಟ್ ಪಂದ್ಯಗಳನ್ನು ನೋಡಿದರೆ ನಮಗೆ ಇದು ಅನಿವಾರ್ಯ ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ.