Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಕ್ರಿಕೆಟ್: ಭಾರತ-ಪಾಕಿಸ್ತಾನ ಕ್ರಿಕೆಟ್ ಕದನಕ್ಕೆ ವೇದಿಕೆ ಸಜ್ಜು

ಏಷ್ಯಾ ಕಪ್ ಕ್ರಿಕೆಟ್: ಭಾರತ-ಪಾಕಿಸ್ತಾನ ಕ್ರಿಕೆಟ್ ಕದನಕ್ಕೆ ವೇದಿಕೆ ಸಜ್ಜು
ದುಬೈ , ಭಾನುವಾರ, 28 ಆಗಸ್ಟ್ 2022 (08:10 IST)
ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಎಂದರೆ ಯಾವುದೇ ಫಾರ್ಮ್ಯಾಟ್, ಟೂರ್ನಿಯಿರಲಿ ಫೈನಲ್ ಗಿಂತಲೂ ಹೆಚ್ಚು ಮಹತ್ವವಿರುತ್ತದೆ. ಪ್ರೇಕ್ಷಕರೂ ಇದೊಂದು ಯುದ್ಧವೇನೋ ಎಂಬಂತೆ ಎದಿರು ನೋಡುತ್ತಾರೆ. ಅಂತಹದ್ದೇ ಒಂದು ಪಂದ್ಯಕ್ಕೆ ಇಂದು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸಾಕ್ಷಿಯಾಗಲಿದೆ.

ಇಂದು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಟಿ20 ಫಾರ್ಮ್ಯಾಟ್ ನಲ್ಲಿ ನಡೆಯಲಿರುವ  ಈ ಪಂದ್ಯದಲ್ಲಿ ಎರಡೂ ತಂಡಗಳೂ ಬಲಿಷ್ಠವೇ. ಕಳೆದ ಬಾರಿ ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಪಡೆಯನ್ನು ಪಾಕ್ ಸುಲಭವಾಗಿ ಮಣಿಸಿತ್ತು. ಹೀಗಾಗಿ ಕಿರು ಮಾದರಿಯಲ್ಲಿ ಪಾಕ್ ಪ್ರಬಲ ತಂಡ. ಅದರಲ್ಲೂ ನಾಯಕ ಬಾಬರ್ ಅಜಮ್ ಪಾಕ್ ಶಕ್ತಿ.

ಆದರೆ ಈಗ ಭಾರತ ತಂಡದಲ್ಲಿ ನಾಯಕತ್ವ ಬದಲಾಗಿದೆ. ತಂಡದಲ್ಲಿ ಹೊಸ ಪ್ರತಿಭಾವಂತ ಆಟಗಾರರು ಬಂದಿದ್ದಾರೆ. ಹೀಗಾಗಿ ಈ ಪಂದ್ಯ ಹಿಂದಿನಂತೆ ಫಲಿತಾಂಶ ಕಾಣದು ಎಂಬುದು ಪ್ರೇಕ್ಷಕರ ನಂಬಿಕೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಭಾರತದ ಬ್ಯಾಟಿಂಗ್ ಶಕ್ತಿ. ಆದರೆ ಹ್ಯಾರಿಸ್ ರೌಫ್, ಹಸನ್ ಅಲಿ, ಶದಾಬ್ ಖಾನ್ ಅವರನ್ನೊಳಗೊಂಡ ಪಾಕ್ ಬೌಲಿಂಗ್ ಬಲಿಷ್ಠವಾಗಿದೆ. ಹೀಗಾಗಿ ಈ ಪಂದ್ಯ ಗೆಲ್ಲಬೇಕಾದರೆ ಭಾರತ ಸರ್ವಾಂಗೀಣ ಪ್ರದರ್ಶನ ನೀಡಬೇಕಾದೀತು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಮತ್ತು ಹಾಟ್  ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕ್ ಪಂದ್ಯಕ್ಕೆ ಮುನ್ನ ರೋಹಿತ್-ಬಾಬರ್ ಮಾತುಕತೆ