Publish Date: Tue, 21 Nov 2017 (09:06 IST)
Updated Date: Tue, 21 Nov 2017 (09:09 IST)
ಮುಂಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ತಂಡ ಏಕದಿನ ಸರಣಿ ಆಡಲಿದೆ. ಆದರೆ ಈ ಸರಣಿಯ ಮೊದಲೆರಡು ಪಂದ್ಯಗಳ ಸಮಯ ಬದಲಾಗಿದೆ.
ಧರ್ಮಶಾಲಾ ಮತ್ತು ಮೊಹಾಲಿಯಲ್ಲಿ ಡಿಸೆಂಬರ್ 10 ಮತ್ತು 13 ರಂದು ನಡೆಯಲಿರುವ ಏಕದಿನ ಪಂದ್ಯಗಳು ಮಧ್ಯಾಹ್ನ 1.30 ಕ್ಕೆ ಆರಂಭವಾಗುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಇದನ್ನು ಎರಡು ಗಂಟೆ ಮುಂಚಿತವಾಗಿ ನಡೆಸಲು ಉದ್ದೇಶಿಸಲಾಗಿದೆ.
ಇದಕ್ಕೆ ಕಾರಣ ಉತ್ತರಭಾರತದಲ್ಲಿ ಹದಗೆಟ್ಟ ವಾತಾವರಣ. ತಡವಾಗಿ ಪಂದ್ಯ ಆರಂಭವಾದರೆ ಪಂದ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಎರಡು ಗಂಟೆಗಳಷ್ಟು ಮುಂಚಿತವಾಗಿ ಪಂದ್ಯ ಆರಂಭಿಸಲು ತೀರ್ಮಾನಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ