Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದ ಈ ಕ್ರಿಕೆಟಿಗನನ್ನು ನೋಡಿದರೆ ರಾಹುಲ್ ದ್ರಾವಿಡ್ ನೆನಪಾಗುತ್ತೆ ಎಂದ ಕೈಫ್

ಟೀಂ ಇಂಡಿಯಾದ ಈ ಕ್ರಿಕೆಟಿಗನನ್ನು ನೋಡಿದರೆ ರಾಹುಲ್ ದ್ರಾವಿಡ್ ನೆನಪಾಗುತ್ತೆ ಎಂದ ಕೈಫ್
ನವದೆಹಲಿ , ಭಾನುವಾರ, 6 ಡಿಸೆಂಬರ್ 2020 (09:25 IST)
ನವದೆಹಲಿ: ಟೀಂ ಇಂಡಿಯಾದ ವಾಲ್ ಎಂದೇ ಕರೆಯಿಸಿಕೊಂಡಿದ್ದ ರಾಹುಲ್ ದ್ರಾವಿಡ್ ತಂಡಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದ ಆಟಗಾರ. ಅಂತಹ ಆಟಗಾರ ಇನ್ನೊಬ್ಬ ಸಿಗರು. ಆದರೆ ದ್ರಾವಿಡ್ ರನ್ನೇ ನೆನಸುವ ಆಟಗಾರನೊಬ್ಬ ಟೀಂ ಇಂಡಿಯಾದಲ್ಲಿ ಈಗ ಇದ್ದಾರೆ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.


ಅವರು ಹೇಳಿರುವುದು ಕನ್ನಡಿಗ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಬಗ್ಗೆ. ರಾಹುಲ್ ದ್ರಾವಿಡ್ ರಂತೆ ತಂಡಕ್ಕಾಗಿ ಯಾವುದೇ ತ್ಯಾಗ, ಹೊಂದಾಣಿಕೆ ಮಾಡಿಕೊಳ್ಳಲೂ ಸಿದ್ಧರಾಗುವ ಕ್ರಿಕೆಟಿಗ ಕೆಎಲ್ ಎಂದು ಮೊಹಮ್ಮದ್ ಕೈಫ್ ಹೊಗಳಿದ್ದಾರೆ. ಅಂತಹ ಕ್ರಿಕೆಟಿಗರು ಅಪೂರ್ವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಟಿ20 ಗೂ ಮೊದಲು ಸಂಕಷ್ಟದಲ್ಲಿ ಆಸ್ಟ್ರೇಲಿಯಾ ನಾಯಕ ಏರಾನ್ ಫಿಂಚ್