Select Your Language

Notifications

webdunia
webdunia
webdunia
webdunia

ಭಾರತ-ಆಸೀಸ್ ಟಿ20: ಶಿಖರ್ ಧವನ್, ಕೆಎಲ್ ರಾಹುಲ್ ಗೆ ದಾಖಲೆ ಮಾಡುವ ಅವಕಾಶ

ಭಾರತ-ಆಸೀಸ್ ಟಿ20: ಶಿಖರ್ ಧವನ್, ಕೆಎಲ್ ರಾಹುಲ್ ಗೆ ದಾಖಲೆ ಮಾಡುವ ಅವಕಾಶ
ಸಿಡ್ನಿ , ಶುಕ್ರವಾರ, 4 ಡಿಸೆಂಬರ್ 2020 (09:05 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ಗೆ ದಾಖಲೆಯೊಂದನ್ನು ಮಾಡುವ ಅವಕಾಶ ಎದುರಾಗಿದೆ.


ಟಿ20 ಕ್ರಿಕೆಟ್ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಶಿಖರ್ ಧವನ್ 1588 ರನ್ ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಅವರು ಇಂದು 29 ರನ್ ಗಳಿಸಿದರೆ ಧೋನಿಯನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಲಿದ್ದಾರೆ. ಇನ್ನು, ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 39 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ 1500 ಪ್ಲಸ್ ರನ್ ಮಾಡಿದ ಆರನೇ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಐಪಿಎಲ್ ತಂಡ ಸೇರ್ಪಡೆಗೆ ಬಿಸಿಸಿಐ ಅಧಿಕೃತ ಒಪ್ಪಿಗೆ