Publish Date: Fri, 04 Dec 2020 (08:56 IST)
Updated Date: Fri, 04 Dec 2020 (08:57 IST)
ಮುಂಬೈ: ಮುಂಬರುವ ಐಪಿಎಲ್ ನಲ್ಲಿ ಹೊಸದಾಗಿ ಎರಡು ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಆಡಳಿತಾತ್ಮಕ ವಿಭಾಗ ಒಪ್ಪಿಗೆ ನೀಡಿದೆ ಎಂಬ ವರದಿಯಾಗಿದೆ.
ಈ ತಿಂಗಳ ಅಂತ್ಯಕ್ಕೆ ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಗೆ ಅಧಿಕೃತ ಒಪ್ಪಿಗೆ ಸಿಗಲಿದೆ. ಡಿಸೆಂಬರ್ 24 ರಂದು ಸಭೆ ನಡೆಯಲಿದ್ದು, ಉಪಾಧ್ಯಕ್ಷರ ಆಯ್ಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳು ಈ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ.