ಮುಂಬೈ: ಈ ಬಾರಿ ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಕ್ರಿಕೆಟ್ ಆಯೋಜಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ಸದ್ಯದಲ್ಲೇ ರಣಜಿ ಕ್ರಿಕೆಟ್ ಆರಂಭಿಸಬೇಕಿದೆ.
ಆದರೆ ಸುರಕ್ಷತೆ ಕಾರಣದಿಂದ ರಣಜಿ ಕ್ರಿಕೆಟ್ ಆಯೋಜಿಸುವ ಬದಲು ಆಟಗಾರರಿಗೆ ಧನ ಸಹಾಯ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೂ ಮೊದಲು ಬಿಸಿಸಿಐ ರಣಜಿ ಕ್ರಿಕೆಟ್ ಆಯೋಜಿಸುವುದಾಗಿ ಹೇಳಿಕೊಂಡಿತ್ತು. ಆದರೆ ಯಾವುದನ್ನೂ ಅಂತಿಮಗೊಳಿಸಿಲ್ಲ.