Publish Date: Wed, 02 Dec 2020 (17:01 IST)
Updated Date: Wed, 02 Dec 2020 (17:03 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಅಂತಿಮ ಏಕದಿನ ಪಂದ್ಯವನ್ನು 13 ರನ್ ಗಳಿಂದ ಗೆಲ್ಲುವುದರ ಮೂಲಕ ಟೀಂ ಇಂಡಿಯಾ ಕೊನೆಗೂ ಗೆಲುವಿನ ಸಿಹಿ ಉಂಡಿದೆ.
ಇದರೊಂದಿಗೆ ಕ್ಲೀನ್ ಸ್ವೀಪ್ ಅವಮಾನವನ್ನು ತಪ್ಪಿಸಿಕೊಂಡಿದೆ. 303 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 289 ರನ್ ಗಳಿಗೆ ಆಲೌಟ್ ಆಯಿತು. ಪದಾರ್ಪಣೆ ಪಂದ್ಯದಲ್ಲಿ ಟಿ ನಟರಾಜನ್ 2, ಶ್ರಾದ್ಧೂಲ್ ಠಾಕೂರ್ 3 ವಿಕೆಟ್ ಕಬಳಿಸಿ ಮಿಂಚಿದರು. ಜಸ್ಪ್ರೀತ್ ಬುಮ್ರಾ ಕೂಡಾ 2 ವಿಕೆಟ್ ಕಬಳಿಸಿದರೆ, ಇನ್ನೊಂದು ವಿಕೆಟ್ ಕ್ರಮವಾಗಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಪಾಲಾಯಿತು. ಆಸೀಸ್ ಪರ ನಾಯಕ ಏರಾನ್ ಫಿಂಚ್ 75 ರನ್, ಗ್ಲೆನ್ ಮ್ಯಾಕ್ಸ್ ವೆಲ್ 59, ಅಲೆಕ್ಸ್ ಕ್ಯಾರೀ 38 ರನ್ ಗಳಿಸಿದರು.