Publish Date: Sat, 05 Dec 2020 (09:10 IST)
Updated Date: Sat, 05 Dec 2020 (09:12 IST)
ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ ಭಾರತ ತಂಡದ ಉಪನಾಯಕನಾಗಿ ಬಡ್ತಿ ಪಡೆದಿರುವ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲೇ ಕಮಾಲ್ ಮಾಡಿದ್ದಾರೆ.
ಉಪನಾಯಕನಾದ ಮೊದಲ ಪಂದ್ಯದಲ್ಲೇ ತಂಡದ ಬ್ಯಾಟಿಂಗ್ ಗೆ ಉಪಯುಕ್ತ ಕೊಡುಗೆ ನೀಡಿ ಮಿಂಚಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ 40 ಎಸೆತಗಳಲ್ಲಿ 51 ರನ್ ಸಿಡಿಸಿ ತಂಡದ ಮೊತ್ತ ಉಬ್ಬಿಸಲು ನೆರವಾದರು. ಇನ್ನು, ರಾಹುಲ್ ಸಾಹಸಕ್ಕೆ ಟ್ವಿಟರಿಗರು ಕೊಂಡಾಡಿದ್ದಾರೆ. ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ರಾಹುಲ್ ಅದೇ ಫಾರ್ಮ್ ನ್ನು ಇಲ್ಲಿಯೂ ಮುಂದುವರಿಸಿದ್ದಾರೆ.