Publish Date: Fri, 04 Dec 2020 (16:47 IST)
Updated Date: Fri, 04 Dec 2020 (16:49 IST)
ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಗಾಯಕ್ಕೊಳಗಾದ ಆಲ್ ರೌಂಡರ್ ರವೀಂದ್ರ ಜಡೇಜಾ ಸ್ಥಾನಕ್ಕೆ ಟೀಂ ಇಂಡಿಯಾ ಫೀಲ್ಡಿಂಗ್ ವೇಳೆ ಬದಲಿ ಆಟಗಾರನಾಗಿ ಯಜುವೇಂದ್ರ ಚಾಹಲ್ ರನ್ನು ಕಣಕ್ಕಿಳಿಸಿದೆ. ಇದು ಆಸೀಸ್ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ನಾಯು ಸೆಳೆತಕ್ಕೊಳಗಾಗಿದ್ದಲ್ಲದೆ, ಕೊನೆಯ ಓವರ್ ನಲ್ಲಿ ತಲೆಗೆ ಬೌನ್ಸರ್ ತಗುಲಿ ಜಡೇಜಾ ಎರಡೆರಡು ಬಾರಿ ಗಾಯಕ್ಕೊಳಗಾಗಿದ್ದರು. ಹೀಗಾಗಿ ಅವರಿಗೆ ಬೌಲಿಂಗ್ ಮಾಡಲಾಗುತ್ತಿಲ್ಲ. ಹೀಗಾಗಿ ಟೀಂ ಇಂಡಿಯಾಗೆ ಯಜುವೇಂದ್ರ ಚಾಹಲ್ ಬೌಲಿಂಗ್ ಮಾಡಲು ಬದಲಿ ಆಟಗಾರನಾಗಿ ಅವಕಾಶ ನೀಡಲಾಗಿದೆ. ಇದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯಕ್ಕೆ ಜಡೇಜಾ ಸ್ಥಿತಿ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ಪರಿಶೀಲನೆ ನಡೆಸುತ್ತಿದೆ.
Krishnaveni K
Publish Date: Fri, 04 Dec 2020 (16:47 IST)
Updated Date: Fri, 04 Dec 2020 (16:49 IST)