Publish Date: Sun, 06 Dec 2020 (08:52 IST)
Updated Date: Sun, 06 Dec 2020 (08:54 IST)
ಸಿಡ್ನಿ: ಯಂಗ್ ಕ್ರಿಕೆಟ್ ಗಳಿಂದ ತುಂಬಿರುವ ಟೀಂ ಇಂಡಿಯಾದಲ್ಲಿ ತರ್ಲೆ ಕ್ರಿಕೆಟಿಗರ ಸಂಖ್ಯೆಯೇ ಜಾಸ್ತಿ. ಹೀಗಿರುವಾಗ ತಂಡದ ಬ್ಯಾಕ್ ಬೆಂಚರ್ಸ್ ಯಾರು ಎಂಬುದನ್ನು ತಮಾಷೆಯಾಗಿ ಕ್ರಿಕೆಟಿಗರ ಕೆಎಲ್ ರಾಹುಲ್ ರಿವೀಲ್ ಮಾಡಿದ್ದಾರೆ.
ಸಿಡ್ನಿಗೆ ದ್ವಿತೀಯ ಟಿ20 ಆಡಲು ಬಸ್ ನಲ್ಲಿ ತೆರಳುವ ವೇಳೆ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಹಾರ್ದಿಕ್ ಪಾಂಡ್ಯ ಬಸ್ ನ ಹಿಂದಿನ ಸೀಟ್ ನಲ್ಲಿ ಕುಳಿತು ತರ್ಲೆ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ನಾವು ತಂಡದ ಬ್ಯಾಕ್ ಬೆಂಚರ್ಸ್ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾವನ್ನು ಆಪತ್ಕಾಲದಿಂದ ಕಾಪಾಡುತ್ತಿರುವುದೂ ಇದೇ ಬ್ಯಾಕ್ ಬೆಂಚರ್ಸ್ ಎಂದರೂ ತಪ್ಪಾಗಲಾರದು ಬಿಡಿ.