Publish Date: Mon, 12 Sep 2022 (08:20 IST)
Updated Date: Mon, 12 Sep 2022 (08:49 IST)
ಮುಂಬೈ: ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಆಯ್ಕೆಯಾಗುವ ಮುನ್ನ ಈ ವಿಭಾಗಕ್ಕೆ ಮೇಜರಿ ಸರ್ಜರಿ ಆಗಲೇಬೇಕಿದೆ.
ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಗಳು ವೇಗಿಗಳಿಗೆ ಸಹಕಾರಿ. ಹೀಗಾಗಿ ತಂಡದಲ್ಲಿ ವೇಗದ ಬೌಲಿಂಗ್ ಸಶಕ್ತವಾಗಿರಬೇಕು.
ಏಷ್ಯಾ ಕಪ್ ನಲ್ಲಿ ಮಾಡಿದಂತೆ ಇಲ್ಲಿಯೂ ದುರ್ಬಲ, ಅನನುಭವಿ ಬೌಲರ್ ಗಳನ್ನು ಕಟ್ಟಿಕೊಂಡು ಹೋದಲ್ಲಿ ಟೀಂ ಇಂಡಿಯಾಗೆ ಹಿನ್ನಡೆಯಾಗುವುದು ಖಂಡಿತಾ. ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆ ಸಮಿತಿ ಈ ವಿಚಾರದ ಬಗ್ಗೆ ಗಮನಹರಿಸಬಹುದು.