ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವೂ ಮೂರೇ ದಿನಕ್ಕೆ ಮುಕ್ತಾಯವಾಗುವುದು ಖಚಿತವಾಗಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ 88 ರನ್ ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಇಂದು 163 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಸೀಸ್ ಗೆ 76 ರನ್ ಗಳ ಗೆಲುವಿನ ಗುರಿ ಸಿಕ್ಕಿದೆ.
ಭಾರತದ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಏಕಾಂಗಿ ಹೋರಾಟ ನಡೆಸಿದ ಚೇತೇಶ್ವರ ಪೂಜಾರ 59 ರನ್ ಗಳಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 26, ರವಿಚಂದ್ರನ್ ಅಶ್ವಿನ್ 16, ಅಕ್ಸರ್ ಪಟೇಲ್ ಅಜೇಯ 15 ರನ್ ಗಳಿಸಿದರು. ಐವರು ಬ್ಯಾಟಿಗರು ಏಕಂಕಿಗೆ ಔಟಾಗಿದ್ದು ವಿಪರ್ಯಾಸ. ಆಸೀಸ್ ಸ್ಪಿನ್ನರ್ ನಥನ್ ಲಿಯೋನ್ ಸ್ಪಿನ್ ದಾಳಿಗೆ ನಲುಗಿದ ಭಾರತ ಮತ್ತೆ ಫ್ಲಾಪ್ ಶೋ ನಡೆಸಿತು. ಲಿಯೋನ್ 8 ವಿಕೆಟ್ ಕಬಳಿಸಿದರು. ನಾಳೆ 76 ರನ್ ಗಳ ಗುರಿ ಬೆನ್ನು ಹತ್ತಿ ಆಸೀಸ್ ದ್ವಿತೀಯ ಇನಿಂಗ್ಸ್ ಆರಂಭಿಸಲಿದೆ. ಒಂದು ವೇಳೆ ಭಾರತ ಇಷ್ಟು ಕನಿಷ್ಠ ಮೊತ್ತದೊಳಗೆ ಎದುರಾಳಿಯನ್ನು ಆಲೌಟ್ ಮಾಡಿ ಗೆಲುವು ತನ್ನದಾಗಿಸಿಕೊಂಡರೆ ಅದು ದಾಖಲೆಯೇ ಆಗಲಿದೆ.