Select Your Language

Notifications

webdunia
webdunia
webdunia
webdunia

ಮಹಿಳಾ ಐಪಿಎಲ್ ಗೆ ಮಹಿಳೆಯರಿಗೆ ಮೈದಾನಕ್ಕೆ ಉಚಿತ ಪ್ರವೇಶ

ಮಹಿಳಾ ಐಪಿಎಲ್ ಗೆ ಮಹಿಳೆಯರಿಗೆ ಮೈದಾನಕ್ಕೆ ಉಚಿತ ಪ್ರವೇಶ
ಮುಂಬೈ , ಗುರುವಾರ, 2 ಮಾರ್ಚ್ 2023 (08:40 IST)
Photo Courtesy: Twitter
ಮುಂಬೈ: ಮಾರ್ಚ್ 4 ರಿಂದ ಆರಂಭವಾಗಲಿರುವ ಮಹಿಳಾ ಐಪಿಎಲ್ ಪಂದ್ಯಾವಳಿ ಬಗ್ಗೆ ಬಿಸಿಸಿಐ ಮಾಹಿತಿ ಪ್ರಕಟಿಸಿದೆ.

ಮಹಾರಾಷ್ಟ್ರದ ಡಿ ವೈ ಪಾಟೀಲ್ ಮೈದಾನ ಮತ್ತು ಬ್ರೆಬೋರ್ನ್ ಮೈದಾನಗಳಲ್ಲಿ ಮಹಿಳಾ ಐಪಿಎಲ್ ಪಂದ್ಯಗಳು ನಡೆಯಲಿವೆ. ಮಾರ್ಚ್ 4 ರಂದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಹೆಚ್ಚಿನ ಪಂದ್ಯಗಳು ಅಪರಾಹ್ನ 3.30 ಮತ್ತು ಸಂಜೆ 7.30 ಕ್ಕೆ ನಡೆಯಲಿದೆ.

ವಿಶೇಷವೆಂದರೆ ಮಹಿಳಾ ಕ್ರಿಕೆಟ್ ನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿಸಿಸಿಐ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಐಪಿಎಲ್ ಪಂದ್ಯವನ್ನು ಮೈದಾನದಲ್ಲಿ ಉಚಿತವಾಗಿ ವೀಕ್ಷಿಸುವ ಆಫರ್ ನೀಡಿದೆ. ಇನ್ನು ನೇರಪ್ರಸಾರ ವೀಕ್ಷಿಸುವವರು ಜಿಯೋ ಆಪ್ ಮತ್ತು ಸ್ಪೋರ್ಟ್ಸ್ 18 ನೆಟ್ ವರ್ಕ್ ನಲ್ಲಿ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ಡರ್-ಗವಾಸ್ಕರ್ ಟೆಸ್ಟ್: ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದ ಟೀಂ ಇಂಡಿಯಾ?!