ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 197 ಕ್ಕೆ ಆಲೌಟ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 109 ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ 197 ರನ್ ಮಾಡಿರುವ ಆಸ್ಟ್ರೇಲಿಯಾ 88 ರನ್ ಗಳ ಮುನ್ನಡೆ ಪಡೆದಿದೆ. ಇದು ಈ ಪಿಚ್ ನಲ್ಲಿ ನಿರ್ಣಾಯಕವಾಗಲಿದೆ.
ನಿನ್ನೆ ದಿನ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ದಿನದಾಟ ಮುಗಿಸಿದ್ದ ಆಸೀಸ್ ಇಂದು ಆರಂಭದ ಅವಧಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೂ ಪೀಟರ್ ಹ್ಯಾಂಡ್ಸ್ ಕೋಂಬ್ 19 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸುತ್ತಿದ್ದಂತೇ ಆಸೀಸ್ ದಿಡೀರ್ ಕುಸಿತ ಕಂಡಿತು. ಕೇವಲ 12 ರನ್ ಗಳಲ್ಲಿ 6 ವಿಕೆಟ್ ಕಳೆದುಕೊಂಡಿತು. 3 ವಿಕೆಟ್ ಪಡೆದ ಅಶ್ವಿನ್ ಗೆ ಸಾಥ್ ನೀಡಿದ ಉಮೇಶ್ ಯಾದವ್ ತಾವೂ 3 ವಿಕೆಟ್ ಕಬಳಿಸಿದರು. ಜಡೇಜಾ ನಿನ್ನೆ 4 ವಿಕೆಟ್ ತಮ್ಮದಾಗಿಸಿಕೊಂಡಿದ್ದರು.