Select Your Language

Notifications

webdunia
webdunia
webdunia
webdunia

ಟೆಸ್ಟ್, ಏಕದಿನ, ಆಲ್ ರೌಂಡರ್ ಪಟ್ಟಿಯಲ್ಲಿ ಭಾರತೀಯರೇ ನಂ.1

ಟೆಸ್ಟ್, ಏಕದಿನ, ಆಲ್ ರೌಂಡರ್ ಪಟ್ಟಿಯಲ್ಲಿ ಭಾರತೀಯರೇ ನಂ.1
ದುಬೈ , ಗುರುವಾರ, 2 ಮಾರ್ಚ್ 2023 (10:00 IST)
ದುಬೈ: ಐಸಿಸಿ ಬಿಡುಗಡೆಗೊಳಿಸಿರುವ ಇತ್ತೀಚೆಗಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ಆಟಗಾರರೇ ಅಗ್ರ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅಶ್ವಿನ್ ಜೊತೆಗೆ ಜಸ್ಪ್ರೀತ್ ಬುಮ್ರಾ ಕೂಡಾ ಟಾಪ್ 10 ರೊಳಗೆ ಸ್ಥಾನ ಉಳಿಸಿಕೊಂಡಿದ್ದಾರೆ.

ಇನ್ನು ಏಕದಿನ ಬೌಲರ್ ಗಳ ಪಟ್ಟಿಯಲ್ಲಿ ಭಾರತದ ಮೊಹಮ್ಮದ್ ಸಿರಾಜ್ ನಂ.1 ಬೌಲರ್ ಆಗಿದ್ದಾರೆ. ಅವರು ಇತ್ತೀಚೆಗೆ ದಿನಗಳಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು.

ಟೆಸ್ಟ್ ಆಲ್ ರೌಂಡರ್ ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ನಂ.1 ಆಗಿದ್ದರೆ ಅಕ್ಸರ್ ಪಟೇಲ್ ಕೂಡಾ ಟಾಪ್ 5 ರೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ಏಕದಿನ ಮತ್ತು ಟಿ20 ಕ್ರಿಕೆಟ್ ಫಾರ್ಮ್ಯಾಟ್ ನಲ್ಲಿ ಟೀಂ ಇಂಡಿಯಾವೇ ವಿಶ್ವ ನಂ.1 ಆಗಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ತಂಡಕ್ಕೆ ಇನ್ನೂ ಯಾಕೆ ಬಂದಿಲ್ಲ ಸ್ಮೃತಿ ಮಂಧನಾ?