Select Your Language

Notifications

webdunia
webdunia
webdunia
webdunia

ತಿರುವನಂತರಪುರಂಗೆ ಬಂದ ಟೀಂ ಇಂಡಿಯಾ: ಎರಡನೇ ಪಂದ್ಯಕ್ಕೆ ಸಜ್ಜು

ಭಾರತ-ಆಸ್ಟ್ರೇಲಿಯಾ ಟಿ20 ಸರಣಿ
ತಿರುವನಂತಪುರಂ , ಶನಿವಾರ, 25 ನವೆಂಬರ್ 2023 (10:50 IST)
Photo Courtesy: Twitter
ತಿರುವನಂತಪುರಂ: ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯಕ್ಕಾಗಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ತಿರುವನಂತರಪುರಂಗೆ ಬಂದಿಳಿದಿದೆ.

ನಾಳೆ ಸಂಜೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ದ್ವಿತೀಯ ಟಿ20 ಪಂದ್ಯ ತಿರುವನಂತಪುರಂನ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಕ್ರಿಕೆಟಿಗರು ನಿನ್ನೆ ಸಂಜೆಯೇ ದೇವರ ನಾಡಿಗೆ ಬಂದಿಳಿದಿದ್ದಾರೆ.

ಇಂದು ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ. ಕಳೆದ ಬಾರಿ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯಕ್ಕಾಗಿ ಟೀಂ ಇಂಡಿಯಾ ಇಲ್ಲಿಗೆ ಬಂದಿತ್ತು. ಆದರೆ ಆಗ ಮಳೆಯಿಂದಾಗಿ ಪಂದ್ಯ ನಡೆದಿರಲಿಲ್ಲ.

ಮೊದಲ ಟಿ20 ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆದಿತ್ತು. ಆ ಪಂದ್ಯವನ್ನು ಟೀಂ ಇಂಡಿಯಾ ಕೊನೆಯ ಓವರ್ ನಲ್ಲಿ ಒಂದು ಎಸೆತ ಬಾಕಿ ಇರುವಂತೆ ರೋಚಕವಾಗಿ 2 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಸರಣಿಯಲ್ಲಿ ಒಟ್ಟು 5 ಪಂದ್ಯಗಳಿದ್ದು, ಭಾರತ ಈಗ 1-0 ಅಂತರದಿಂದ ಮುನ್ನಡೆ ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆನ್ ಸ್ಟೋಕ್ಸ್ ಈ ಕಾರಣಕ್ಕೆ ಐಪಿಎಲ್ 2024 ರಲ್ಲಿ ಆಡಲ್ಲ