Publish Date: Sat, 25 Nov 2023 (10:30 IST)
Updated Date: Sat, 25 Nov 2023 (10:45 IST)
ಚೆನ್ನೈ: ಐಪಿಎಲ್ ನಲ್ಲಿ ದುಬಾರಿ ಆಟಗಾರರಾಗಿರುವ ಇಂಗ್ಲೆಂಡ್ ಮೂಲದ ಬೆನ್ ಸ್ಟೋಕ್ಸ್ ಮುಂಬರುವ ಸೀಸನ್ ಗೆ ಅಲಭ್ಯರಾಗಿರುವುದಾಗಿ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಬಾರಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ರನ್ನು 16.25 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದರೆ ಆ ಸೀಸನ್ ನಲ್ಲಿ ಸ್ಟೋಕ್ಸ್ ಕೊಡುಗೆ ಅಷ್ಟೇನೂ ಇರಲಿಲ್ಲ. ಹಾಗಿದ್ದರೂ ಆಲ್ ರೌಂಡರ್ ಎಂಬ ನಿಟ್ಟಿನಲ್ಲಿ ಸ್ಟೋಕ್ಸ್ ಪ್ರಮುಖ ಆಟಗಾರರಾಗಿದ್ದರು.
ಆದರೆ ಐಪಿಎಲ್ 2024 ರಲ್ಲಿ ಅವರು ಆಡದೇ ಇರಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣ ವರ್ಕ್ ಲೋಡ್. ಅತಿಯಾದ ಕ್ರಿಕೆಟ್ ನಿಂದ ದೇಹ ದಣಿಯುವ ಕಾರಣಕ್ಕೆ ಕೊಂಚ ವಿಶ್ರಾಂತಿಗಾಗಿ ಐಪಿಎಲ್ ನಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಹೇಳಿದ್ದಾರೆ. ಐಪಿಎಲ್ ಮುಗಿದ ಬಳಿಕ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಈ ಕಾರಣಕ್ಕೇ ಬೆನ್ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ.
ಇದಕ್ಕೆ ಮೊದಲೂ ಕೊರೋನಾ ನಡುವೆಯೂ ಐಪಿಎಲ್ ನಡೆದಾಗಲೂ ಬೆನ್ ಸ್ಟೋಕ್ಸ್ ಮಾನಸಿಕ ಒತ್ತಡವಾಗುತ್ತದೆ ಎಂಬ ಕಾರಣಕ್ಕೆ ಐಪಿಎಲ್ ಆಡಿರಲಿಲ್ಲ.