Select Your Language

Notifications

webdunia
webdunia
webdunia
webdunia

IND vs ENG test: ಕೆಎಲ್ ರಾಹುಲ್, ಬುಮ್ರಾ ಔಟ್: ರಾಂಚಿಗೆ ಬಂದ ಟೀಂ ಇಂಡಿಯಾ

Dhruv Jurel -Yashasvi

Krishnaveni K

ರಾಂಚಿ , ಬುಧವಾರ, 21 ಫೆಬ್ರವರಿ 2024 (09:17 IST)
Photo Courtesy: Instagram
ರಾಂಚಿ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯವಾಡಲು ಟೀಂ ಇಂಡಿಯಾ ನಿನ್ನೆ ಜಾರ್ಖಂಡ್ ನ ರಾಂಚಿಗೆ ಬಂದಿಳಿದಿದೆ. ಆದರೆ ಈ ಪಂದ್ಯಕ್ಕೆ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಗೈರಾಗಲಿದ್ದಾರೆ.

ಟೀಂ ಇಂಡಿಯಾ ರಾಂಚಿಗೆ ಹೊರಟಿರುವ ಫೋಟೋಗಳನ್ನು ಕ್ರಿಕೆಟಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಆದರೆ ರಾಂಚಿಗೆ ಬಂದಿಳಿದ ಟೀಂ ಇಂಡಿಯಾದಲ್ಲಿ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಕಂಡುಬಂದಿಲ್ಲ. ಬುಮ್ರಾಗೆ ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ನೀಡಲು ನಿರ್ಧರಿಸಿಲಾಗಿದೆ. ಹೀಗಾಗಿ ಬುಮ್ರಾ ತಂಡದ ಜೊತೆ ಪ್ರಯಾಣಿಸಿಲ್ಲ.

ಫೆಬ್ರವರಿ 23 ರಿಂದ ರಾಂಚಿ ಮೈದಾನದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಸತತ ಕ್ರಿಕೆಟ್ ನಿಂದ ಬಳಲಿರುವ ಬುಮ್ರಾಗೆ ವಿಶ್ರಾಂತಿ ನೀಡಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಮುಂಬರುವ ವಿಶ್ವಕಪ್ ಹಿನ್ನಲೆಯಲ್ಲಿ ಬುಮ್ರಾಗೆ ಗಾಯವಾಗದಂತೆ ಕಾಪಾಡಿಕೊಳ್ಳುವುದೇ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ. ಕಳೆದ ವರ್ಷ ಬೆನ್ನಿನ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಬುಮ್ರಾರನ್ನು ಟೀಂ ಇಂಡಿಯಾ ಎಚ್ಚರಿಕೆಯಿಂದ ಬಳಸಿಕೊಳ್ಳುತ್ತಿದೆ.

ಹೀಗಾಗಿ ಈಗ ವೈದ್ಯರ ಸಲಹೆ ಮೇರೆಗೆ ನಾಲ್ಕನೇ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ರಾಂಚಿಯಲ್ಲಿ ಬುಮ್ರಾ ಅನುಪಸ್ಥಿತಿಯಲ್ಲೂ ತಂಡ ಗೆದ್ದರೆ ಅಂತಿಮ ಪಂದ್ಯಕ್ಕೂ ಅವರು ಗೈರಾಗಲಿದ್ದಾರೆ. ನಾಲ್ಕನೇ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳಲಿದೆ. ಇಂದಿನಿಂದ ಟೀಂ ಇಂಡಿಯಾ ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ.

ಜೊತೆಗೆ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಗಾಯದ ಕಾರಣದಿಂದ ತಂಡದಿಂದ ಹೊರುಗಳಿದಿದ್ದ ಬ್ಯಾಟಿಗ ಕೆಎಲ್ ರಾಹುಲ್ ರನ್ನೂ ಅನ್ ಫಿಟ್ ಎಂಬ ಕಾರಣಕ್ಕೆ ನಾಲ್ಕನೇ ಪಂದ್ಯದಿಂದ ಹೊರಗಿಡಲಾಗಿದೆ. ಕೊನೆಯ ಮೂರು ಪಂದ್ಯಗಳಿಗೆ ಆಯ್ಕೆಯಾದ ತಂಡಲ್ಲಿ ರಾಹುಲ್ ಕೂಡಾ ಸ್ಥಾನ ಪಡೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿಗೆ ಜನ್ಮವಿತ್ತ ಅನುಷ್ಕಾ: ಖುಷಿ ಸುದ್ದಿ ಹಂಚಿಕೊಂಡ ವಿರಾಟ್ ಕೊಹ್ಲಿ