Select Your Language

Notifications

webdunia
webdunia
webdunia
webdunia

ಯಶಸ್ವೀ ಜೈಸ್ವಾಲ್ ನಸೀಬು ಬದಲಿಸಿದ್ದ ರೋಹಿತ್ ಶರ್ಮಾರ ಒಂದು ಫೋನ್ ಕರೆ

Yashasvi Jaiswal-Rohit Sharma

Krishnaveni K

ಮುಂಬೈ , ಮಂಗಳವಾರ, 20 ಫೆಬ್ರವರಿ 2024 (08:21 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾದ ಯಂಗ್ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ ವೃತ್ತಿ ಜೀವನಕ್ಕೆ ರೋಹಿತ್ ಶರ್ಮಾಗೆ ಹೇಗೆ ಟ್ವಿಸ್ಟ್ ಕೊಟ್ಟಿದ್ದರು ಎಂಬುದನ್ನು ಅವರ ಬಾಲ್ಯದ ಕೋಚ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಾಧಾರಣ ಕುಟುಂಬದಿಂದ ಬಂದಿದ್ದ ಯಶಸ್ವಿ ಜೈಸ್ವಾಲ್ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಮೂಲತಃ ಮುಂಬೈಯವರಾದ ಯಶಸ್ವಿ ಇಲ್ಲಿನ ರಾಜ್ಯ ತಂಡದ ಪರ ಆಡುತ್ತಿದ್ದರು. ಈ ವೇಳೆ ರೋಹಿತ್ ಮಾಡಿದ ಫೋನ್ ಕರೆಯೊಂದು ಅವರ ವೃತ್ತಿ ಜೀವನಕ್ಕೆ ತಿರುವು ನೀಡಿತು ಎಂದು ಬಾಲ್ಯದ ಕೋಚ್ ಜ್ವಾಲಾ ಸಿಂಗ್ ಹೇಳಿದ್ದಾರೆ.

‘ಇದು ನಡೆದಿದ್ದ 4-5 ವರ್ಷಗಳ ಹಿಂದೆ. ಆಗ ರೋಹಿತ್ ನಾಯಕರಾಗಿರಲಿಲ್ಲ. ಯಶಸ್ವಿ ಮುಂಬೈ ತಂಡದ ಪರ ಆಡುತ್ತಿದ್ದರು. ಒಂದು ದಿನ ಯಶಸ್ವಿ ಜೊತೆಗಾರ ಆಟಗಾರನ ಫೋನ್ ಗೆ ಕರೆ ಮಾಡಿದ್ದ ರೋಹಿತ್ ಶರ್ಮಾ ‘ನೀನು ನನ್ನ ಸ್ಥಾನದಲ್ಲಿರಬೇಕಿತ್ತು. ನಿನ್ನಲ್ಲಿ ಆ ಸಾಮರ್ಥ್ಯವಿದೆ’ ಎಂದು ಸ್ಪೂರ್ತಿ ತುಂಬಿದ್ದರಂತೆ. ರೋಹಿತ್ ಕರೆ ಮಾಡಿದ ಬೆನ್ನಲ್ಲೇ ಉತ್ಸಾಹದಿಂದ ನನಗೆ ಕರೆ ಮಾಡಿದ್ದ ಯಶಸ್ವಿ ವಿಚಾರ ತಿಳಿಸಿದ್ದರು. ರೋಹಿತ್ ಕರೆ ಅವರಲ್ಲಿ ಹೊಸ ಚೈತನ್ಯ ತುಂಬಿತ್ತು. ಈಗ ರೋಹಿತ್ ಆತನಿಗೆ ನಾಯಕ ಮತ್ತು ಆರಂಭಿಕ ಜೊತೆಗಾರ. ಹಾಗಾಗಿ ಆರಾಮವಾಗಿ ಆಡುತ್ತಿದ್ದಾನೆ’ ಎಂದಿದ್ದಾರೆ ಜ್ವಾಲಾ ಸಿಂಗ್.

ಇಂಗ್ಲೆಂಡ್ ವಿರುದ್ಧ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಸತತ ಎರಡು ದ್ವಿಶತಕ ಸಿಡಿಸಿದ್ದರು. ಅವರ ಈ ಅಪ್ರತಿಮ ಇನಿಂಗ್ಸ್ ನ್ನು ಕ್ರಿಕೆಟ್ ಜಗತ್ತು ಕೊಂಡಾಡಿತ್ತು. ಹಲವು ದಾಖಲೆಗಳನ್ನೂ ಅವರು ಮುರಿದಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಒಬ್ಬ ಒಳ್ಳೆಯ ಆಟಗಾರ ಸಿಕ್ಕಿದ್ದಾರೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಶತಕ ಸಿಡಿಸಿದ ಬಳಿಕ ಯಶಸ್ವಿ ಜೈಸ್ವಾಲ್ ಪ್ರತೀ ಬಾರಿ ಇವರಿಗೆ ಕಿಸ್ ಮಾಡ್ತಾರೆ!