Select Your Language

Notifications

webdunia
webdunia
webdunia
webdunia

ಶತಕ ಸಿಡಿಸಿದ ಬಳಿಕ ಯಶಸ್ವಿ ಜೈಸ್ವಾಲ್ ಪ್ರತೀ ಬಾರಿ ಇವರಿಗೆ ಕಿಸ್ ಮಾಡ್ತಾರೆ!

Yashasvi Jaiswal

Krishnaveni K

ರಾಜ್ ಕೋಟ್ , ಸೋಮವಾರ, 19 ಫೆಬ್ರವರಿ 2024 (17:19 IST)
Photo Courtesy: Twitter
ರಾಜ್ ಕೋಟ್: ಟೀಂ ಇಂಡಿಯಾ ಯಂಗ್ ಸೆನ್ಸೇಷನಲ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಪ್ರತೀ ಬಾರಿ ಶತಕ ಸಿಡಿಸಿದಾಗ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ ಬಳಿಕ ಫ್ಲೈಯಿಂಗ್ ಕಿಸ್ ಮಾಡುತ್ತಾರೆ. ಅದು ಯಾರಿಗೆ ಗೊತ್ತಾ?

ಎಲ್ಲಾ ಕ್ರಿಕೆಟಿಗರಿಗೂ ಶತಕ, ದ್ವಿಶತಕ ಸಿಡಿಸಿದ ಬಳಿಕ ಸಂಭ್ರಮಿಸಲು ಒಂದೊಂದು ರೀತಿ ಸ್ಟೈಲ್ ಇದೆ. ಕೊಹ್ಲಿ ತಮ್ಮ ಪೆಂಡೆಂಟ್ ಗೆ ಕಿಸ್ ಮಾಡಿದರೆ ರೋಹಿತ್ ತಮ್ಮ ಮದುವೆ ರಿಂಗ್ ಗೆ ಮುತ್ತಿಕ್ಕಿದ್ದನ್ನು ನೋಡಿದ್ದೇವೆ. ಆದರೆ ಜೈಸ್ವಾಲ್ ಪ್ರತೀ ಬಾರಿ ಮೇಲೆ ನೋಡಿ ಕಿಸ್ ಮಾಡುತ್ತಾರೆ. ಹಾಗಿದ್ದರೆ ಪ್ರತೀ ಬಾರಿ ಯಶಸ್ವಿ ಶತಕ ಸಿಡಿಸಿದ ಬಳಿಕ ಫ್ಲೈಯಿಂಗ್ ಕಿಸ್ ಮಾಡುವುದು ಯಾರಿಗೆ?

ರಾಜ್ ಕೋಟ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಬಳಿಕವೂ ಜೈಸ್ವಾಲ್ ಬ್ಯಾಟ್, ಹೆಲ್ಮೆಟ್ ಕೆಳಕ್ಕೆ ಹಾಕಿ ಎರಡೂ ಕೈ ಎತ್ತಿ ಫ್ಲೈಯಿಂಗ್ ಕಿಸ್ ಮಾಡಿದ್ದರು. ವಾಸ್ತವವಾಗಿ ಅವರು ಯಾರಿಗೆ ಈ ರೀತಿ ಕಿಸ್ ಮಾಡುತ್ತಾರೆ ಎಂಬುದು ಅಭಿಮಾನಿಗಳಿಗೆ ಗೊತ್ತಿರಲ್ಲ.

ಆದರೆ ಜೈಸ್ವಾಲ್ ಈ ರೀತಿ ಫ್ಲೈಯಿಂಗ್ ಕಿಸ್ ಕಳುಹಿಸುವುದು ತಮ್ಮ ಅಭಿಮಾನಿಗಳಿಗಾಗಿ ಅಂತೆ. ಅತೀ ಕಡಿಮೆ ಪಂದ್ಯಗಳಿಂದ ಸತತ ಎರಡು ದ್ವಿಶತಕ ಸಿಡಿಸಿ ದಾಖಲೆ ಮಾಡಿರುವ ಯಶಸ್ವಿ ಜೈಸ್ವಾಲ್ ಈ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ತಾರೆಯಾಗಿದ್ದಾರೆ. ಜೈಸ್ವಾಲ್ ಈಗ ಭಾರತೀಯ ಕ್ರಿಕೆಟ್ ರಂಗದ ಯಂಗ್ ಸೆನ್ಸೇಷನ್. ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದರೂ ಅವರ ಆಟದಿಂದ ಅನೇಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಈ ರೀತಿ ಫ್ಲೈಯಿಂಗ್ ಕಿಸ್ ಮಾಡುವುದು ಯಾರಿಗೆ ಎಂದು ಕೇಳಿದಾಗ ಜೈಸ್ವಾಲ್ ತಮ್ಮ ಅಭಿಮಾನಿಗಳಿಗೆ ಎಂದಿದ್ದಾರೆ.  ಸಾಮಾನ್ಯವಾಗಿ ಕ್ರಿಕೆಟಿಗರು ತಮ್ಮ ತಂದೆ, ತಾಯಿ, ಪತ್ನಿ, ಗೆಳತಿ ಹೀಗೆ ತಮ್ಮ ಕುಟುಂಬಸ್ಥರಿಗೆ ಕಿಸ್ ಮಾಡಿ ಸಂಭ್ರಮಿಸುವುದು ಇದೆ. ಆದರೆ ಜೈಸ್ವಾಲ್ ತಮ್ಮ ಅಭಿಮಾನಿಗಳಿಗಾಗಿ ಹೀಗೆ ಮಾಡುತ್ತಾರೆ ಎಂದು ತಿಳಿದು ಅವರ ಮೇಲೆ ಅಭಿಮಾನಿಗಳ ಅಭಿಮಾನ ಇನ್ನಷ್ಟು ಹೆಚ್ಚಾಗುವುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಸ್ವಾಲ್, ಸರ್ಫರಾಜ್, ಜ್ಯುರೆಲ್ ಗೆ ರೋಹಿತ್ ಶರ್ಮಾ ಸ್ಪೆಷಲ್ ಗಿಫ್ಟ್