Select Your Language

Notifications

webdunia
webdunia
webdunia
webdunia

IND vs ENG test: ಶತಕ ಸಿಡಿಸಿದ ಬೆನ್ನಲ್ಲೇ ಮೈದಾನದಿಂದ ಹೊರ ನಡೆದ ಯಶಸ್ವಿ ಜೈಸ್ವಾಲ್

Yashasvi Jaiswal

Krishnaveni K

ರಾಜ್ ಕೋಟ್ , ಶನಿವಾರ, 17 ಫೆಬ್ರವರಿ 2024 (17:08 IST)
Photo Courtesy: Twitter
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಬೆನ್ನಲ್ಲೇ ಟೀಂ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ ಮೈದಾನ ಬಿಟ್ಟು ಹೊರನಡೆದಿದ್ದಾರೆ.

ದ್ವಿತೀಯ ಇನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ವಿಕೆಟ್ ಆರಂಭದಲ್ಲೇ ಕಳೆದುಕೊಂಡ ನಂತ ತಂಡಕ್ಕೆ ಆಸರೆಯಾದ ಯಶಸ್ವಿ ಜೈಸ್ವಾಲ್ ತಮ್ಮ ಹೊಡೆಬಡಿಯ ಆಟದ ಮೂಲಕ ತಂಡವನ್ನು ಸುರಕ್ಷಿತ ಸ್ಥಾನಕ್ಕೆ ಕರೆದೊಯ್ದರು. ಒಟ್ಟು 133 ಎಸೆತ ಎದುರಿಸಿದ ಜೈಸ್ವಾಲ್ 104 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.

ಈ ವೇಳೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಒಮ್ಮೆ ಮೈದಾನಕ್ಕೆ ಬಂದು ಫಿಸಿಯೋ ಟ್ರೀಟ್ ಮೆಂಟ್ ಮಾಡಿದ ಬಳಿಕ ಮತ್ತೆ ಜೈಸ್ವಾಲ್ ಬ್ಯಾಟಿಂಗ್ ಪುನರಾರಂಭಿಸಿದರು. ಆದರೆ ಅವರಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದರಿಂದ ಮೈದಾನದಿಂದ ರಿಟೈರ್ಡ್ ಹರ್ಟ್ ಆಗಿ ಹೊರ ನಡೆಯಬೇಕಾಯಿತು.

ಜೈಸ್ವಾಲ್ ಸ್ಥಾನಕ್ಕೆ ರಜತ್ ಪಟಿದಾರ್ ಬ್ಯಾಟಿಂಗ್ ಗಿಳಿದರು. ಪಟಿದಾರ್ ಕಳೆದ ಮೂರೂ ಇನಿಂಗ್ಸ್ ಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಅವರಿಗೆ ಇದು ಕೊನೆಯ ಅವಕಾಶವಾಗಿತ್ತು. ಆದರೆ ಇಂದೂ ಕೂಡಾ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲದ ಆಟಗಾರನೆನಿಸಿಕೊಂಡರು. ಇನ್ನೊಂದೆಡೆ ಗಿಲ್ 65 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಇಂದಿನ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ್ದು ಒಟ್ಟಾರೆ 322 ರನ್ ಗಳ ಮುನ್ನಡೆ ಸಾಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG test: ಯಶಸ್ವಿ ಜೈಸ್ವಾಲ್ ಬ್ಯಾಕ್ ಟು ಬ್ಯಾಕ್ ಸೆಂಚುರಿ