Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಇನ್, ರಜತ್ ಪಟಿದಾರ್ ಔಟ್, ಬುಮ್ರಾ ಡೌಟ್

KL Rahul

Krishnaveni K

ರಾಂಚಿ , ಮಂಗಳವಾರ, 20 ಫೆಬ್ರವರಿ 2024 (12:46 IST)
Photo Courtesy: Twitter
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಆಡುವ ಬಳಗದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ಖಚಿತವಾಗಿದೆ.

ಮೂರನೇ ಟೆಸ್ಟ್ ಪಂದ್ಯವನ್ನು 434 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಇದೀಗ ಭಾರತಕ್ಕೆ ಉಳಿದ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಗೆದ್ದರೂ ಸರಣಿ ಕೈವಶವಾಗಲಿದೆ. ಹಾಗಿದ್ದರೂ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿ ದೃ಼ಷ್ಟಿಯಿಂದ ಭಾರತ ಎರಡೂ ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸಲಿದೆ.

ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾ ಬ್ಯಾಟಿಂಗ್ ನಲ್ಲಿ ಹಿರಿಯ ಆಟಗಾರರ ಕೊರತೆ ಕಾಡುತ್ತಿದೆ. ಹಾಗಿದ್ದರೂ ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ನಂತಹ ಯುವ ಪ್ರತಿಭೆಗಳು ಆ ಕೊರತೆ ನೀಗಿಸುತ್ತಿದ್ದಾರೆ. ಇದೀಗ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ತೊಡೆನೋವಿನಿಂದಾಗಿ ಕಳೆದ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ಕೆಎಲ್ ರಾಹುಲ್ ಕಮ್ ಬ್ಯಾಕ್ ಮಾಡುವ ಸಾಧ‍್ಯತೆ ದಟ್ಟವಾಗಿದೆ. ಹೀಗಾಗಿ ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಜತ್ ಪಟಿದಾರ್ ಮುಂದಿನ ಪಂದ್ಯಕ್ಕೆ ಹೊರಹೋಗುವುದು ಖಚಿತವಾಗಿದೆ. ಇನ್ನು, ಸತತ ಕ್ರಿಕೆಟ್ ಆಡಿ ಬಳಲಿರುವ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದ್ದು, ಅವರು ಹೊರಗುಳಿದರೆ ಅರ್ಷ್ ದೀಪ್ ಸಿಂಗ್ ಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ‍್ಯತೆಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕಟ್ಟಿಹಾಕಲು ಬೌಲಿಂಗ್ ಮಾಡಲು ಸಿದ್ಧರಾದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್