ಬೆಂಗಳೂರು: ನಾಳೆ ನೆದರ್ಲ್ಯಾಂಡ್ಸ್ ವಿರುದ್ಧ ಏಕದಿನ ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯವಾಡಲಿರುವ ಟೀಂ ಇಂಡಿಯಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿ ಅಭ್ಯಾಸ ನಡೆಸಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಕ್ರಿಕೆಟಿಗರು ನಿನ್ನೆಯಿಂದ ಚಿನ್ನಸ್ವಾಮಿ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು.
ಬೆಂಗಳೂರಿನ ಮೈದಾನದಲ್ಲಿ ಬೇರೆ ದೇಶದ ಪಂದ್ಯಗಳಿಗೇ ಸಾವಿರಾರು ಅಭಿಮಾನಿಗಳು ಸೇರಿದ್ದರು. ಇದು ಇಲ್ಲಿನ ಕ್ರಿಕೆಟ್ ಪ್ರೇಮಕ್ಕೆ ಸಾಕ್ಷಿ. ಇನ್ನು, ಭಾರತ ತಂಡ ಆಡುತ್ತಿದೆ ಎಂದರೆ ಕೇಳಬೇಕೇ? ತಮ್ಮ ಮೆಚ್ಚಿನ ಆಟಗಾರರ ಪಂದ್ಯ ನೋಡಲು ನಾಳೆ ಸ್ಟೇಡಿಯಂ ಭರ್ತಿಯಾಗುವ ನಿರೀಕ್ಷೆಯಿದೆ.