Publish Date: Sat, 11 Nov 2023 (11:19 IST)
Updated Date: Sat, 11 Nov 2023 (09:23 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟ ಕೊನೆಯ ಹಂತಕ್ಕೆ ಬಂದು ನಿಂತಿದ್ದು, ಇಂದು ಸೆಮಿಫೈನಲ್ ಗೇರಲಿರುವ ತಂಡಗಳು ಫೈನಲ್ ಆಗಲಿವೆ.
ನಾಳೆ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಏಕೈಕ ಲೀಗ್ ಪಂದ್ಯ ಬಾಕಿಯಿದೆ. ಅದಕ್ಕೆ ಮೊದಲು ಇಂದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಬಳಿಕ ಭಾರತಕ್ಕೆ ಸೆಮಿಫೈನಲ್ ನಲ್ಲಿ ಎದುರಾಳಿ ಯಾರು ಎನ್ನುವುದು ಖಚಿತವಾಗಲಿದೆ.
ಈಗಾಗಲೇ ಭಾರತ, ದ.ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ನಲ್ಲಿ ಸ್ಥಾನ ಖಚಿತಪಡಿಸಿವೆ. ನ್ಯೂಜಿಲೆಂಡ್ ಕೂಡಾ ಸೆಮಿಫೈನಲ್ ಬಹುತೇಕ ಖಚಿತಪಡಿಸಿದರೂ ಇಂದಿನ ಪಂದ್ಯದ ನಂತರವಷ್ಟೇ ಅಧಿಕೃತವಾಗಲಿದೆ. ಬಹುತೇಕ ಭಾರತಕ್ಕೆ ಸೆಮಿಫೈನಲ್ ನ್ಯೂಜಿಲೆಂಡ್ ಎದುರಾಳಿಯಾಗುವ ಸಾಧ‍್ಯತೆಯೇ ಹೆಚ್ಚಾಗಿದೆ.