ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ದ.ಆಫ್ರಿಕಾ ವಿರುದ್ಧ 5 ವಿಕೆಟ್ ಗಳ ಸೋಲು ಕಂಡ ಅಫ್ಘಾನಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 244 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಆಫ್ರಿಕಾ 47.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಗೆಲುವು ಪಡೆಯಿತು. ಇದರೊಂದಿಗೆ ಆಫ್ರಿಕಾ ಎರಡನೇ ಸ್ಥಾನದೊಂದಿಗೆ ಲೀಗ್ ಹಂತದ ಪಂದ್ಯ ಮುಗಿಸಿತು. ಇತ್ತ ಅಫ್ಘಾನಿಸ್ತಾನ ಈ ಟೂರ್ನಿಯುದ್ದಕ್ಕೂ ಪ್ರಬಲ ತಂಡಗಳಿಗೂ ಉತ್ತಮ ಪೈಪೋಟಿ ನೀಡುವ ಮೂಲಕ 6 ನೇ ಸ್ಥಾನಕ್ಕೆ ಅಭಿಯಾನ ಕೊನೆಗೊಳಿಸಿದೆ.
ವಿಶೇಷವೆಂದರೆ ಅಫ್ಘಾನಿಸ್ತಾನ ಮುಂಬರುವ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಪಡೆದಿದೆ. ಇದೇ ಮೊದಲನೇ ಬಾರಿಗೆ ಅಫ್ಘಾನಿಸ್ತಾನ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.