Publish Date: Sat, 11 Nov 2023 (10:15 IST)
Updated Date: Sat, 11 Nov 2023 (10:18 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಇದು ಎರಡೂ ತಂಡಗಳಿಗೆ ಕೊನೆಯ ಲೀಗ್ ಪಂದ್ಯ. ಆಸ್ಟ್ರೇಲಿಯಾ ಈಗಾಗಲೇ ಸೆಮಿಫೈನಲ್ ನಲ್ಲಿ ಸ್ಥಾನ ಪಡೆದಿರುವುದರಿಂದ ಇದು ಔಪಚಾರಿಕ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಆಸೀಸ್ ಕಳೆದ ಪಂದ್ಯದಲ್ಲಿ ಸ್ಮರಣೀಯ ಇನಿಂಗ್ಸ್ ಆಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಗೆ ವಿಶ್ರಾಂತಿ ನೀಡಿದೆ. ಅವರ ಬದಲು ಸ್ಟೀವ್ ಸ್ಮಿತ್, ಸೀನ್ ಅಬೋಟ್ ತಂಡದಲ್ಲಿದ್ದಾರೆ.
ಅತ್ತ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ನಜ್ಮುಲ್ ಹೊಸೈನ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ. ಶಕೀಬ್ ಬದಲಿಗೆ ನಸುಮ್ ಆಡುತ್ತಿದ್ದಾರೆ.