Publish Date: Thu, 21 Jul 2022 (09:50 IST)
Updated Date: Thu, 21 Jul 2022 (10:02 IST)
ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಟ್ರಿನಿಡಾಡ್ ಗೆ ಬಂದಿಳಿದಿದೆ.
ಇಂದು ಟೀಂ ಇಂಡಿಯಾ ಅಭ್ಯಾಸಕ್ಕಿಳಿದಿದ್ದು, ಮೈದಾನಕ್ಕೆ ಆಗಮಿಸುತ್ತಿದ್ದಂತೇ ಮಳೆಯ ಆಗಮನವಾಗಿದೆ. ನಾಳೆ ನಡೆಯಲಿರುವ ಪಂದ್ಯಕ್ಕೆ ಇಂದು ಎಚ್ಚರಿಕೆಯ ಗಂಟೆಯಾಗಿದೆ.
ಮಳೆಯಿಂದಾಗಿ ಕ್ರಿಕೆಟಿಗರು ಒಳಾಂಗಣದಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಬೇಕಾಯಿತು. ಮೈದಾನ ಒದ್ದೆಯಾಗಿದ್ದು, ಸಿಬ್ಬಂದಿ ಒಣಗಿಸುವ ಕೆಲಸದಲ್ಲಿ ನಿರತರಾಗಿದ್ದರು. ನಾಳೆಯೂ ಮಳೆಯಾದರೆ ಪಂದ್ಯಕ್ಕೆ ಅಡ್ಡಿಯಾಗಬಹುದು.