Publish Date: Wed, 20 Jul 2022 (10:45 IST)
Updated Date: Wed, 20 Jul 2022 (10:47 IST)
ಟ್ರಿನಿಡಾಡ್: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಗಂಭೀರ ಸ್ವಭಾವದವರು. ಅವರು ತಮಾಷೆಯಾಗಿರುವ ಕ್ಷಣಗಳು ಅಪರೂಪ.
ಆದರೆ ಈಗ ಟೀಂ ಇಂಡಿಯಾ ಹಂಗಾಮಿ ನಾಯಕ ಶಿಖರ್ ಧವನ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದ್ದು, ಅಲ್ಲಿ ರಾಹುಲ್ ದ್ರಾವಿಡ್ ಫನ್ನಿ ಅವತಾರವನ್ನು ನೋಡಿ ನೆಟ್ಟಿಗರು ಅವಾಕ್ಕಾಗಿದ್ದಾರೆ.
ಟೀಂ ಇಂಡಿಯಾ ಯುವ ಪಡೆ ಟ್ರಿನಿಡಾಡ್ ಗೆ ಕಾಲಿಡುತ್ತಿದ್ದಂತೆ ಹಾಯ್ ಎನ್ನುತ್ತಾ ಒಬ್ಬರ ಹಿಂದೊಬ್ಬರು ಹೋಟೆಲ್ ಗೆ ತೆರಳುತ್ತಾರೆ. ಕೊನೆಯಲ್ಲಿ ಹುಡುಗರ ಜೊತೆ ರಾಹುಲ್ ದ್ರಾವಿಡ್ ಕೂಡಾ ಫನ್ನಿಯಾಗಿ ಹಾಯ್ ಎನ್ನುತ್ತಾ ಸೇರಿಕೊಳ್ಳುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.