Publish Date: Wed, 20 Jul 2022 (08:40 IST)
Updated Date: Wed, 20 Jul 2022 (09:06 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಟೆಸ್ಟ್ ಫಾರ್ಮ್ಯಾಟ್ ಗಿಂತ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಹೆಚ್ಚು ಯಶಸ್ಸು ಕಾಣುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಇತ್ತೀಚೆಗೆ ಹೇಳಿದ್ದರು.
ಅವರು ಹೇಳಿದ್ದಕ್ಕೆ ಕಾರಣವೂ ಇದೆ. ಭಾರತ ತಂಡಕ್ಕೆ ಇತ್ತೀಚೆಗೆ ಸೇರ್ಪಡೆಯಾದವರೆಲ್ಲಾ ಐಪಿಎಲ್ ಪ್ರತಿಭೆಗಳು. ಇವರೆಲ್ಲಾ ಸೀಮಿತ ಓವರ್ ಗಳ ಪರಿಣಿತ ಆಟಗಾರರು. ಹೀಗಾಗಿ ಕಿರು ಮಾದರಿಯಲ್ಲಿ ಭಾರತ ತಂಡಕ್ಕೆ ಒಬ್ಬ ಪ್ರಮುಖ ಆಟಗಾರ ಅಲಭ್ಯರಾದರೂ ತೊಂದರೆಯಾಗುತ್ತಿಲ್ಲ. ಅಲ್ಲದೆ ಹಿರಿಯ ಕ್ರಿಕೆಟಿಗರು ಕೈ ಕೊಟ್ಟಾಗ ಪಂದ್ಯವೇ ಮುಗಿದು ಹೋಯ್ತು ಎನ್ನುವ ಪರಿಸ್ಥಿತಿಯಿಲ್ಲ.
ಆದರೆ ಟೆಸ್ಟ್ ಮಾದರಿಗೆ ಅದರದ್ದೇ ಆದ ರೀತಿಯಿದೆ. ಈ ಫಾರ್ಮ್ಯಾಟ್ ನಲ್ಲಿ ಆಡಲು ಅನುಭವ, ಟೆಕ್ನಿಕ್, ತಾಳ್ಮೆ ಎಲ್ಲವೂ ಬೇಕು. ಆದರೆ ಯುವ ಆಟಗಾರರು ಇನ್ನೂ ಪಳಗಬೇಕು. ಹೀಗಾಗಿಯೇ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾಗೆ ಹಿನ್ನಡೆಯಾಗುತ್ತಿದೆ.