Publish Date: Tue, 19 Jul 2022 (10:01 IST)
Updated Date: Tue, 19 Jul 2022 (10:06 IST)
ಮುಂಬೈ: ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಗೆ ಸಹಾಯ ಮಾಡಲು ರೆಡಿ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಕೊಹ್ಲಿ ಪದೇ ಪದೇ ಆಫ್ ಲೈನ್ ಆಚೆ ಹೋಗುವ ಚೆಂಡು ಕೆಣಕಿ ಔಟಾಗುತ್ತಿದ್ದಾರೆ. ಈ ಕಾರಣಕ್ಕೆ ಅವರು ಟ್ರೋಲ್ ಆಗುತ್ತಿದ್ದಾರೆ. ಇದೀಗ ಗವಾಸ್ಕರ್ ಕೊಹ್ಲಿ ಸಮಸ್ಯೆ ನಿವಾರಿಸಲು ತಮ್ಮಲ್ಲಿ ಸಲಹೆಗಳಿವೆ ಎಂದಿದ್ದಾರೆ.
ನನಗೆ ಕೊಹ್ಲಿ 20 ನಿಮಿಷ ಸಮಯ ಕೊಟ್ರೆ ಸಾಕು. ಅವರ ಸಮಸ್ಯೆ ಏನು ಮತ್ತು ಅದಕ್ಕೆ ಏನು ಮಾಡಬಹುದು ಎಂದು ಹೇಳಿಕೊಡುವೆ. ಅದರಿಂದ ಸಮಸ್ಯೆಯಾಗಲ್ಲ ಎಂದಲ್ಲ, ಆದರೆ ನನ್ನ ಸಲಹೆ ಅವರಿಗೆ ಉಪಯೋಗವಾಗಬಹುದು. ಒಬ್ಬ ಆರಂಭಿಕನಾಗಿ ಅನುಭವವಿರುವುದರಿಂದ ನನಗೆ ಗೊತ್ತಿರುವ ಸಲಹೆಗಳನ್ನು ನೀಡಬಲ್ಲೆ. ಅದು ಅವರಿಗೆ ಉಪಯೋಗವಾಗಬಹುದು ಎಂದಿದ್ದಾರೆ.