Publish Date: Tue, 19 Jul 2022 (10:19 IST)
Updated Date: Tue, 19 Jul 2022 (10:19 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಸರಣಿ ಗೆಲವಿನ ರೂವಾರಿಯಾಗಿದ್ದ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಜೊತೆಗೆ ತಾವು ಪಂದ್ಯಕ್ಕೆ ಮುನ್ನ 45 ನಿಮಿಷಗಳ ಸಂಭಾಷಣೆ ನಡೆಸಿದ್ದಾಗಿ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು.
ಆದರೆ ರಿಷಬ್ ಗೆ ಸ್ಪೂರ್ತಿ ನೀಡುವಂತಹ 45 ನಿಮಿಷಗಳ ಸಂಭಾಷಣೆ ಏನಾಗಿದ್ದಿರಬಹುದು ಎಂದು ಟ್ವಿಟರಿಗರು ಕುತೂಹಲ ವ್ಯಕ್ತಪಡಿಸಿದ್ದರು. ಆದರೆ ಯುವಿ ಆಗಲೀ ರಿಷಬ್ ಆಗಲೀ ಆ ಸೀಕ್ರೆಟ್ ಬಿಟ್ಟುಕೊಡಲೇ ಇಲ್ಲ.
ಯುವರಾಜ್ ಸಿಂಗ್ ಟ್ವೀಟ್ ಗೆ ರಿಷಬ್, ಖಂಡಿತವಾಗಿಯೂ ಆ ಸಂಭಾಷಣೆ ಸಹಾಯ ಮಾಡಿತು ಯುವಿ ಪಾ ಎಂದು ನಗುವಿನ ಇಮೋಜಿ ಜೊತೆಗೆ ಪ್ರತಿಕ್ರಿಯಿಸಿದ್ದಾರೆ. ಆದರೆ 45 ನಿಮಿಷಗಳ ಸಂಭಾಷಣೆ ಏನಾಗಿತ್ತು ಎಂಬುದನ್ನು ಮಾತ್ರ ಅವರೂ ಗುಟ್ಟು ಬಿಟ್ಟುಕೊಡಲಿಲ್ಲ.