ಲಂಡನ್: ಇಂಗ್ಲೆಂಡ್ ನಲ್ಲಿ ಏಕದಿನ, ಟಿ20 ಸರಣಿ ಗೆದ್ದ ಬಳಿಕ ಪತ್ನಿ, ಮಗಳೊಂದಿಗೆ ರೋಹಿತ್ ಶರ್ಮಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಇದರ ಜೊತೆಗೆ ರೋಹಿತ್ ಶರ್ಮಾ ತಮ್ಮ ಹಳೆಯ ದೋಸ್ತ್ ಯುವರಾಜ್ ಸಿಂಗ್ ರನ್ನು ಭೇಟಿಯಾಗಿದ್ದಾರೆ. ಈ ಆತ್ಮೀಯ ಕ್ಷಣದ ಫೋಟೋಗಳನ್ನು ರೋಹಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಹಳೆಯ ದೋಸ್ತ್ ನ ಮತ್ತೆ ಭೇಟಿಯಾದಾಗ ಎಂದು ಯುವಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಯುವಿ ಕೂಡಾ ಪ್ರತಿಕ್ರಿಯಿಸಿದ್ದು ನನ್ನ ಸಹೋದರ ಎಂದು ಪ್ರೀತಿಯಿಂದ ಹೇಳಿದ್ದಾರೆ.