Publish Date: Wed, 20 Jul 2022 (09:20 IST)
Updated Date: Wed, 20 Jul 2022 (09:32 IST)
ಮುಂಬೈ: ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ಮರಳಿರುವ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುವ ಮೂಡ್ ನಲ್ಲಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಕೊಹ್ಲಿ ವಿಶಿಷ್ಟವಾಗಿ ಡ್ಯಾನ್ಸ್ ಸ್ಟೆಪ್ ಮಾಡಿದ್ದಾರೆ. ವರ್ಕೌಟ್ ಶೈಲಿಯಲ್ಲೇ ಡ್ಯಾನ್ಸ್ ಮಾಡಿ ತಾವು ಒಳ್ಳೆಯ ನೃತ್ಯಗಾರನೂ ಹೌದು ಎಂದು ತೋರಿಸಿದ್ದಾರೆ.
ಕೊಹ್ಲಿ ಡ್ಯಾನ್ಸ್ ವಿಡಿಯೋ ನೋಡಿ ಖ್ಯಾತ ನೃತ್ಯ ಸಂಯೋಜಕ ಪಿಯೂಷ್ ಭಗತ್ ಮುಂದಿನ ಬಾರಿ ನನ್ನನ್ನೂ ಕರೆಯಿರಿ ಎಂದು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಮೊದಲು ಆಟದ ಬಗ್ಗೆ ಗಮನಕೊಡಿ ಸಲಹೆಯನ್ನೂ ನೀಡಿದ್ದಾರೆ.