ಟೀಂ ಇಂಡಿಯಾ ಮುಂದಿದೆ ಮೆಗಾ ಹೋಂ ಸೀರೀಸ್

Webdunia
ಮಂಗಳವಾರ, 21 ಸೆಪ್ಟಂಬರ್ 2021 (10:00 IST)
ಮುಂಬೈ: ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾಗೆ ವಿಶ್ರಾಂತಿಯೇ ಇಲ್ಲ. ಮುಂದಿನ 8 ತಿಂಗಳ ಕಾಲ ನಿರಂತರವಾಗಿ ಕ್ರಿಕೆಟ್ ಸರಣಿ ಆಡಲಿದೆ. ಬಿಸಿಸಿಐ ಹೊರಡಿಸಿರುವ ನೂತನ ವೇಳಾಪಟ್ಟಿಯಲ್ಲಿ ಭಾರತದ ಮುಂದಿನ ಸರಣಿಗಳ ವಿವರ ಸಿಕ್ಕಿದೆ.


ಟಿ20 ವಿಶ್ವಕಪ್ ಮುಗಿದ ಬಳಿಕ ಕೇವಲ ಮೂರೇ ದಿನದಲ್ಲಿ ಟೀಂ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ. ಇದಾದ ಬಳಿಕ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಈ ಎಲ್ಲಾ ಸರಣಿ ನವಂಬರ್ 17 ರಿಂದ ಡಿಸೆಂಬರ್ 7 ವರೆಗೂ ನಡೆಯಲಿದೆ.

ಇದಾದ ಬಳಿಕ ದ.ಆಫ್ರಿಕಾಗೆ ಪ್ರಯಾಣ ಬೆಳೆಸಲಿರುವ ಟೀಂ ಇಂಡಿಯಾ ಡಿಸೆಂಬರ್ 17 ರಿಂದ ಜನವರಿ 26 ರವರೆಗೆ ಕ್ರಿಕೆಟ್ ಸರಣಿ ಆಡಲಿದೆ. ಅದಾದ ಬಳಿಕ ಮತ್ತೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6 ರಿಂದ 20ರವರೆಗೆ ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಐದು ದಿನಗಳ ಬ್ರೇಕ್ ಬಳಿಕ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಎರಡು ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನೊಳಗೊಂಡ ಸರಣಿ ಮಾರ್ಚ್ 18ರವರೆಗೂ ಮುಂದುವರಿಯಲಿದೆ.  ಅದಾದ ಬಳಿಕ ಎಂದಿನಂತೆ ಐಪಿಎಲ್ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಭಾರತಕ್ಕೆ ದ.ಆಫ್ರಿಕಾ ಪ್ರವಾಸ ಮಾಡಲಿದ್ದು, ಟಿ20 ಸರಣಿ ಆಡಲಿದೆ. ಇದರ ಜೊತೆಗೆ ಇಂಗ್ಲೆಂಡ್ ವಿರುದ್ಧ ಬಾಕಿಯಿರುವ ಟೆಸ್ಟ್ ಪಂದ್ಯವೂ ನಡೆಯುವ ಸಾಧ‍್ಯತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ 2026 ರಲ್ಲಿ ಇಶಾನ್ ಕಿಶಾನ್ ಅತ್ಯುತ್ತಮ ಇನ್ನಿಂಗ್ಸ್: ಜೇಮ್ಸ್ ಫ್ರಾಂಕ್ಲಿನ್ ಮೆಚ್ಚುಗೆ

ಸೆಲ್ಫೀ ಬೇಕು ಎಂದು ಹುಡುಗನ ಜೊತೆ ಕ್ರಿಕೆಟಿಗ ರಿಯಾನ್ ಪರಾಗ್ ಹೀಗೆ ವರ್ತಿಸೋದಾ Video

IPL 2026: ಧೋನಿ ಥರಾ ಸ್ಟಂಪ್ ಔಟ್ ಮಾಡಿದ ಸಂಜು ಸ್ಯಾಮ್ಸನ್ ಮೇಲೆ ಕ್ಲಾಸನ್ ಕಿರಿಕ್ Video

ವಿಷಲ್ ಹಾಕಿ ಮನೆಗೆ ನಡೀರಿ... ಸಿಎಸ್ ಕೆ ಸೋಲಿಸಿ ಅಭಿಮಾನಿಗಳಿಗೆ ಸಿಗ್ನಲ್ ಕೊಟ್ಟ ಇಶಾನ್ ಕಿಶನ್ Video

IPL 2026: ಚಿಪಾಕ್ ನಲ್ಲಿ ಕೊನೆಯ ಬಾರಿಗೆ... ಭಾವುಕರಾದ ಧೋನಿ Video

ಮುಂದಿನ ಸುದ್ದಿ
Show comments