ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸುವ ಮೊದಲು ಟೀಂ ಇಂಡಿಯಾ ಬ್ಯಾಟಿಗ ಶುಬ್ಮನ್ ಗಿಲ್ ಗೆ ಮ್ಯಾನೇಜ್ ಮೆಂಟ್ ಗಡುವು ನೀಡಿತ್ತು ಎನ್ನಲಾಗಿದೆ.
ಶುಬ್ಮನ್ ಗಿಲ್ ಕಳೆದ ಕೆಲವು ಪಂದ್ಯಗಳಿಂದ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಅವರನ್ನು ತಂಡದಿಂದ ಕಿತ್ತು ಹಾಕಬೇಕೆಂದು ಒತ್ತಾಯಗಳು ಕೇಳಿಬರುತ್ತಿತ್ತು. ಒಂದು ವೇಳೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದೇ ಹೋಗಿದ್ದರೆ ಗಿಲ್ ಗೆ ಗೇಟ್ ಪಾಸ್ ಸಿಗುತ್ತಿತ್ತು.
ಶುಬ್ಮನ್ ಗಿಲ್ ಗೆ ಈ ಪಂದ್ಯದಲ್ಲಿ ತಮ್ಮ ಫಾರ್ಮ್ ಸಾಬೀತುಪಡಿಸಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಅಂತಿಮ ಗಡುವು ನೀಡಿತ್ತು ಎಂಬ ಮಾತಿದೆ. ಪ್ರೂವ್ ಮಾಡಲೇಬೇಕಾದ ಪಂದ್ಯದಲ್ಲಿ ಗಿಲ್ ಶತಕ ಸಿಡಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಒಂದು ವೇಳೆ ಅವರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದೇ ಹೋಗಿದ್ದರೆ ಮುಂದಿನ ಪಂದ್ಯಕ್ಕೆ ಸರ್ಫರಾಜ್ ಖಾನ್ ಅವರ ಸ್ಥಾನ ಕಬಳಿಸುತ್ತಿದ್ದರು. ಆದರೆ ಶತಕ ಸಿಡಿಸಿದ ಗಿಲ್ ಈಗ ನಿರಾಳರಾಗಿದ್ದಾರೆ.
ಆದರೆ ತಂಡದ ಇನ್ನೊಬ್ಬ ಬ್ಯಾಟಿಗ ಶ್ರೇಯಸ್ ಅಯ್ಯರ್ ಭಾರೀ ಟೀಕೆಗೊಳಗಾಗಿದ್ದಾರೆ. ಅವರ ಬ್ಯಾಟಿನಿಂದ ಶತಕ ಬಂದು ಎಷ್ಟೋ ಕಾಲವಾಗಿದೆ. ಟೆಸ್ಟ್ ಮಾದರಿಯಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬೇಕು. ಆದರೆ ಅವರಿಂದ ಅಂತಹ ಪ್ರದರ್ಶನ ಬರುತ್ತಿಲ್ಲ. ಹೀಗಾಗಿ ಮುಂದಿನ ಪಂದ್ಯಕ್ಕೆ ಕೊಕ್ ನೀಡಿದರೂ ಅಚ್ಚರಿಯಿಲ್ಲ.