Select Your Language

Notifications

webdunia
webdunia
webdunia
webdunia

IND vs ENG test: ಸೂಕ್ತ ಸಮಯದಲ್ಲಿ ಕಮ್ ಬ್ಯಾಕ್ ಮಾಡಿದ ಟೀಂ ಇಂಡಿಯಾ

IND vs ENG test

Krishnaveni K

ವಿಶಾಖಪಟ್ಟಣಂ , ಸೋಮವಾರ, 5 ಫೆಬ್ರವರಿ 2024 (11:40 IST)
Photo Courtesy: Twitter
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಇಂದು ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ.

ಭಾರತ ನೀಡಿರುವ 399 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಿನ್ನೆಯ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿ ದಿನದಾಟ ಮುಗಿಸಿತ್ತು. ನಿನ್ನೆ ಅಜೇಯರಾಗಿದ್ದ ಆರಂಭಿಕ ಕ್ರಾವ್ಲೇ ಇಂದು ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ 73 ರನ್ ಗಳಿಸಿದ್ದಾಗ ಕ್ರಾವ್ಲೇ ವಿಕೆಟ್ ನ್ನು ಕುಲದೀಪ್ ಯಾದವ್ ಬಲಿ ಪಡೆದರು. ಕ್ರಾವ್ಲೇ ಬ್ಯಾಟಿಂಗ್ ನೋಡುತ್ತಿದ್ದರೆ ಕಳೆದ ಪಂದ್ಯದಲ್ಲಿ ಒಲಿ ಪಾಪ್ ಬ್ಯಾಟಿಂಗ್ ನೆನಪಾಗಿದ್ದಂತೂ ನಿಜ. ಕಳೆದ ಪಂದ್ಯದಲ್ಲೂ ಟೀಂ ಇಂಡಿಯಾ ಇದೇ ಸ್ಥಿತಿಯಲ್ಲಿತ್ತು. ಆದರೆ ಒಲಿ ಪಾಪ್ ಏಕಾಂಗಿಯಾಗಿ ಆಡಿ ಪಂದ್ಯ ಕಸಿದುಕೊಂಡಿದ್ದರು. ಆದರೆ ಈ ಬಾರಿ ಆ ರೀತಿ ಆಗಲು ಟೀಂ ಇಂಡಿಯಾ ಬೌಲರ ಗಳು ಬಿಟ್ಟಿಲ್ಲ. ಕ್ರಾವ್ಲೇ ವಿಕೆಟ್ ಪಡೆದು ಇಂಗ್ಲೆಂಡ್ ಗೆ ತಕ್ಕ ಆಘಾತವಿಕ್ಕಿದರು.

ಕಳೆದ ಪಂದ್ಯದ ಹೀರೋ ಒಲಿ ಪಾಪ್ ರನ್ನು 23 ರನ್ ಗಳಿಸಿದ್ದಾಗ ಅಶ್ವಿನ್ ಪೆವಿಲಿಯನ್ ಗಟ್ಟಿದರು. ನಿನ್ನೆ ಅಜೇಯರಾಗುಳಿದಿದ್ದ ನೈಟ್ ವಾಚ್ ಮನ್ ರೆಹಾನ್ ಅಹ್ಮದ್ 23 ರನ್ ಗಳಿಸಿ ಔಟಾದರು. ಇದೀಗ ಭೋಜನ ವಿರಾಮಕ್ಕೆ ಮೊದಲು ಕೊನೆಯ ಎಸೆತದಲ್ಲಿ ಜಾನಿ ಬೇರ್ ಸ್ಟೋ 26 ರನ್ ಗಳಿಸಿ ಔಟಾಗುವ ಮೂಲಕ ಇಂಗ್ಲೆಂಡ್ ಸಂಕಷ್ಟಕ್ಕೀಡಾಗಿದೆ. ಇದೀಗ ಕ್ರೀಸ್ ನಲ್ಲಿ ನಾಯಕ ಬೆನ್ ಸ್ಟೋಕ್ ಖಾತೆ ತೆರೆಯದೇ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇಂಗ್ಲೆಂಡ್ ಗೆಲುವಿಗಾಗಿ ಇನ್ನೂ 205 ರನ್ ಗಳಿಸಬೇಕಿದೆ. ಆದರೆ ಯಾವುದೂ ಅಸಾಧ‍್ಯವಲ್ಲ. ಹೀಗಾಗಿ ಭೋಜನ ವಿರಾಮದ ಬಳಿಕ ಟೀಂ ಇಂಡಿಯಾ ಸಾಧ‍್ಯವಾದಷ್ಟು ಬೇಗ ಬೆನ್ ಸ್ಟೋಕ್ಸ್ ವಿಕೆಟ್ ಪಡೆಯಬೇಕಿದೆ. ಕಳೆದ ಇನಿಂಗ್ಸ್ ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಸ್ಪಿನ್ನರ್ ಅಶ್ವಿನ್ ಇದುವರೆಗೆ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಉಳಿದಂತೆ ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಹೆಂಡತಿಯ ಮುಖ ರಿವೀಲ್ ಮಾಡಿದ ಇರ್ಫಾನ್ ಪಠಾಣ್