Select Your Language

Notifications

webdunia
webdunia
webdunia
webdunia

IND vs ENG test: ಇಂಗ್ಲೆಂಡ್ ಗೆದ್ದು ಸೇಡು ತೀರಿಸಿಕೊಂಡ ಟೀಂ ಇಂಡಿಯಾ

IND vs ENG test

Krishnaveni K

ವಿಶಾಖಪಟ್ಟಣಂ , ಸೋಮವಾರ, 5 ಫೆಬ್ರವರಿ 2024 (14:54 IST)
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 106 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ದ್ವಿತೀಯ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಈಗ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. 399 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಹೊರಟ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 292 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ 106 ರನ್ ಗಳ ಸೋಲು ಕಂಡಿತು. ಭಾರತದ ಪರ ಎರಡೂ ಇನಿಂಗ್ಸ್ ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠರಾದರು.

ಇಂಗ್ಲೆಂಡ್ ಕುಸಿತಕ್ಕೆ ಕಾರಣವಾದ ಅಶ್ವಿನ್-ಬುಮ್ರಾ
ಕಳೆದ ಪಂದ್ಯದಲ್ಲಿ ಇದೇ ಪರಿಸ್ಥಿತಿಯಿದ್ದರೂ ಇಂಗ್ಲೆಂಡ್ ಯಶಸ್ವಿಯಾಗಿ ರನ್ ಬೆನ್ನಟ್ಟಿತ್ತು. ಆದರೆ ಕಳೆದ ಪಂದ್ಯದಲ್ಲಿ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಟೀಂ ಇಂಡಿಯಾ ಬೌಲಿಂಗ್ ನಡೆಸಿತು. ಅದರಲ್ಲೂ ವಿಶೇಷವಾಗಿ ಅನುಭವಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನುಲುಬು ಮುರಿದರು. ಅಶ್ವಿನ್ ಇಂಗ್ಲೆಂಡ್ ನ ಜೋ ರೂಟ್, ಒಲಿ ಪಾಪ್ ಮತ್ತು ಬೆನ್ ಡಕೆಟ್ ರಂತಹ ಪ್ರಮುಖ ವಿಕೆಟ್ ಕಬಳಿಸಿದರೆ, ಕೊನೆಯಲ್ಲಿ ಭಾರತಕ್ಕೆ ಮುಳುವಾಗುವ ಆತಂಕ ಮೂಡಿಸಿದ ಬೆನ್ ಫೋಕ್ಸ್ ಮತ್ತು ಟಾಮ್ ಹಾರ್ಟ್ಲೀ ವಿಕೆಟ್ ಕಬಳಿಸಿ ಬುಮ್ರಾ ಗೆಲುವಿನ ರೂವಾರಿಯಾದರು. ಮೊದಲ ಇನಿಂಗ್ಸ್ ನಲ್ಲಿ ಬುಮ್ರಾ 6 ವಿಕೆಟ್ ಕಬಳಿಸಿದ್ದರು.

ಅಂತಿಮವಾಗಿ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್ ಹಂಚಿಕೊಂಡರೆ ಉಳಿದಂತೆ ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮುಕೇಶ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು. ಭಾರತ ಮೊದಲ ಇನಿಂಗ್ಸ್ ನಲ್ಲಿ 396 ಮತ್ತು ಇಂಗ್ಲೆಂಡ್ 253 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ 255 ಮತ್ತು ಇಂಗ್ಲೆಂಡ್ 292 ರನ್ ಗಳಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG test: ಜೋಶ್ ಹೇಗಿದೆ? ಜಾನಿ ಬೇರ್ ಸ್ಟೋಗೆ ಅಶ್ವಿನ್ ಚಮಕ್