Select Your Language

ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ

webdunia
ಲಾರ್ಡ್ಸ್ , ಸೋಮವಾರ, 16 ಆಗಸ್ಟ್ 2021 (08:46 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ.


ನಾಲ್ಕನೇ ದಿನದಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ. ಮೊದಲ ಇನಿಂಗ್ಸ್ ನಲ್ಲಿ 27 ರನ್ ಗಳ ಹಿನ್ನಡೆ ಅನುಭವಿಸಿದ್ದ ಭಾರತಕ್ಕೆ ಈಗ 154 ರನ್ ಗಳ ಮುನ್ನಡೆಯಷ್ಟೇ ಲಭಿಸಿದೆ.

ಭಾರತ ಅಂತಿಮ ದಿನ ಎಷ್ಟು ಸಾಧ್ಯವಾಗುತ್ತೋ ಅಷ್ಟು ಹೊತ್ತು ಬ್ಯಾಟಿಂಗ್ ನಡೆಸಿದರೆ ಡ್ರಾ ಸಾಧಿಸಲು ಅವಕಾಶಗಳಿವೆ. ಸದ್ಯಕ್ಕೆ ಕ್ರೀಸ್ ನಲ್ಲಿ 14 ರನ್ ಗಳಿಸಿರುವ ರಿಷಬ್ ಪಂತ್, ಇಶಾಂತ್ ಶರ್ಮಾ 4 ರನ್ ಗಳಿಸಿ ಆಡುತ್ತಿದ್ದಾರೆ. ರವೀಂದ್ರ ಜಡೇಜಾ ಕೂಡಾ ಔಟಾಗಿರುವುದು ಭಾರತಕ್ಕೆ ದೊಡ್ಡ ಆಘಾತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2ನೇ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ