Select Your Language

Notifications

webdunia
webdunia
webdunia
webdunia

ಚೇತೇಶ್ವರ ಪೂಜಾರಗೆ ಕೊನೇ ಚಾನ್ಸ್?

webdunia
ಲಾರ್ಡ್ಸ್ , ಭಾನುವಾರ, 15 ಆಗಸ್ಟ್ 2021 (12:10 IST)
ಲಾರ್ಡ್ಸ್: ಪದೇ ಪದೇ ಅವಕಾಶ ಕೊಟ್ಟರೂ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ವೈಫಲ್ಯ ಮುಂದುವರಿದಿದೆ. ಹೀಗಾಗಿ ಈ ಸರಣಿ ಪೂಜಾರ ಪಾಲಿಗೆ ಕೊನೆಯ ಚಾನ್ಸ್ ಆಗುವ ಸಾಧ್ಯತೆಯಿದೆ.


ಕಳೆದ ಪಂದ್ಯ ಬಳಿಕ ಕೊಹ್ಲಿ ಫಾರ್ಮ್ ಕಳೆದುಕೊಂಡಿರುವ ಪೂಜಾರ, ರೆಹಾನೆಗೆ ಬೆಂಬಲ ಸೂಚಿಸಿದ್ದರು. ಹಾಗಿದ್ದರೂ ತಂಡಕ್ಕೆ ಯುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್, ಪೃಥ್ವಿ ಶಾರನ್ನು ಕರೆಸಿಕೊಂಡಿರುವುದು ಪೂಜಾರಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದು.

ಸದ್ಯಕ್ಕೆ ಕ್ವಾರಂಟೈನ್ ಮುಗಿಸಿರುವ ಸೂರ್ಯಕುಮಾರ್ ಯಾದವ್ ಮುಂದಿನ ಟೆಸ್ಟ್ ಪಂದ್ಯದ ವೇಳೆಗೆ ತಂಡಕ್ಕೆ ಲಭ್ಯರಾಗಬಹುದು. ಈಗಾಗಲೇ ಪೂಜಾರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಬ್ಯಾಟ್ಸ್ ಮನ್ ಗೆ ಇಷ್ಟೊಂದು ಅವಕಾಶಗಳು ಸಿಗಲ್ಲ. ಆದರೆ ಪೂಜಾರ ತಮಗೆ ಇಷ್ಟೊಂದು ಅವಕಾಶ ಸಿಕ್ಕಿಯೂ ಅದನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ರೂಟ್’ ಕೀಳಲು ವಿಫಲರಾದ ಟೀಂ ಇಂಡಿಯಾ ಬೌಲರ್ ಗಳು