Publish Date: Tue, 24 Jul 2018 (09:23 IST)
Updated Date: Tue, 24 Jul 2018 (11:16 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಬಸ್ ಡ್ರೈವರ್ ಜೆಫ್ ಗುಡ್ ವಿನ್ ಸುರೇಶ್ ರೈನಾ ಹಿಂದೊಮ್ಮೆ ತಮ್ಮ ಪತ್ನಿಗೆ ಮಾಡಿದ ಉಪಕಾರದ ಸ್ಮರಣೆ ಮಾಡಿಕೊಂಡಿದ್ದಾರೆ.
‘ಕೆಲವು ವರ್ಷಗಳ ಹಿಂದೆ ನನ್ನ ಪತ್ನಿಗೆ ಹುಷಾರಿಲ್ಲದೇ ಇದ್ದಾಗ ನಾನು ತೀವ್ರ ಹಣದ ಅಭಾವದಲ್ಲಿದ್ದೆ. ಆಗ ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ತಮ್ಮ ಶರ್ಟ್ ಹರಾಜಿಗೆ ಇಡಲು ಕೊಟ್ಟರು. ಅದರಲ್ಲಿ ಬಂದ ಹಣದಿಂದ ಪತ್ನಿಗೆ ಚಿಕಿತ್ಸೆ ಕೊಡಿಸಿದೆ’ ಎಂದು ಗುಡ್ ವಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಾವು ಆಸ್ಟ್ರೇಲಿಯಾ ಸೇರಿದಂತೆ ಅನೇಕ ತಂಡಗಳಿಗೆ ಡ್ರೈವರ್ ಆಗಿ ಕೆಲಸ ಮಾಡಿದ್ದರೂ ಟೀಂ ಇಂಡಿಯಾ ಕ್ರಿಕೆಟಿಗರು ಎಲ್ಲರಿಗಿಂತ ಬೆಸ್ಟ್ ಎಂದು ಗುಡ್ ವಿನ್ ಹೇಳಿದ್ದಾರೆ. ಆಸೀಸ್ ಆಟಗಾರರು ಪಂದ್ಯ ಮುಗಿದು ತಡರಾತ್ರಿ 2 ಗಂಟೆಯವರೆಗೂ ಪೆವಿಲಿಯನ್ ಮದ್ಯ ಸೇವಿಸುತ್ತಾ ಪಾರ್ಟಿ ಮಾಡುತ್ತಿದ್ದರು. ಆದರೆ ಟೀಂ ಇಂಡಿಯಾ ಕ್ರಿಕೆಟಿಗರು ಪಕ್ಕಾ ವೃತ್ತಿಪರರು. ಮಾನವೀಯತೆಯುಳ್ಳವರು ಎಂದು ಗುಡ್ ವಿನ್ ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.