Publish Date: Tue, 03 Jul 2018 (09:24 IST)
Updated Date: Tue, 03 Jul 2018 (09:26 IST)
ಡುಬ್ಲಿನ್: ಐರ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಹಿರಿಯ ಕ್ರಿಕೆಟಿಗ ಧೋನಿ ಆಡದೇ ವಾಟರ್ ಬಾಯ್ ಆಗಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು. ಅಷ್ಟಕ್ಕೂ ಆವತ್ತು ಧೋನಿ ನೀರು ಸರಬರಾಜು ಮಾಡುವ ಕೆಲಸಕ್ಕೆ ಕೈ ಹಾಕಿದ್ದು ಯಾಕೆಂದು ಗೊತ್ತಾಗಿದೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಪತ್ರಕರ್ತರು ಧೋನಿಯನ್ನು ನೀರು ಸರಬರಾಜು ಮಾಡಲು ಮಾಡಲು ಮೈದಾನಕ್ಕೆ ಕಳುಹಿಸಿದ್ದೇಕೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಿಟ್ಟಿಗೆದ್ದ ಕೊಹ್ಲಿ ಯಾರು ನೀರು ಸರಬರಾಜು ಮಾಡಬೇಕೆಂದು ನಾವು ನಿರ್ಧಾರ ಮಾಡುವುದಲ್ಲ. ಧೋನಿಯೇ ತಾವಾಗಿಯೇ ಹೋದರು ಎಂದಿದ್ದರು.
ಆದರೆ ಈ ಬಗ್ಗೆ ಧೋನಿ ಮಾತ್ರ ಕೂಲ್ ಆಗಿಯೇ ಉತ್ತರಿಸಿದ್ದಾರೆ. ‘ನಾನು ಆವತ್ತು ಪಂದ್ಯವಾಡುತ್ತಿರಲಿಲ್ಲ. ಪೆವಿಲಿಯನ್ ನಲ್ಲೇ ಕೂತು ಪಂದ್ಯ ನೋಡುತ್ತಾ ಬೋರ್ ಆಗುತ್ತಿತ್ತು. ಅದಕ್ಕೇ ನೀರು ಎತ್ತಿಕೊಂಡು ಸೀದಾ ಮೈದಾನಕ್ಕೆ ಹೋದೆ. ಆಗ ಮನೀಶ್ ಪಾಂಡೆ ಬ್ಯಾಟ್ ತುಂಡಾಗಿದೆ ಎಂದರು. ಹಾಗಾಗಿ ಅವರಿಗೆ ಬ್ಯಾಟ್ ಕಿಟ್ ನ್ನೂ ತೆಗೆದುಕೊಂಡು ಹೋಗಿದ್ದೆ’ ಎಂದು ಧೋನಿ ನಗುತ್ತಲೇ ಉತ್ತರಿಸಿ ವಿವಾದ ತಣ್ಣಗಾಗಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.