Publish Date: Thu, 29 Aug 2019 (09:55 IST)
Updated Date: Thu, 29 Aug 2019 (10:01 IST)
ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಜಮೈಕಾದಲ್ಲಿ ಭಾರತೀಯ ರಾಯಭಾರಿ ಇಲಾಖೆ ಭರ್ಜರಿ ಔತಣ ಕೂಟ ಏರ್ಪಡಿಸಿದೆ.
ಕ್ರಿಕೆಟಿಗರು, ಸಿಬ್ಬಂದಿಗಳು ಸೇರಿದಂತೆ ಇಡೀ ಟೀಂ ಇಂಡಿಯಾವೇ ಔತಣ ಕೂಟದಲ್ಲಿ ಪಾಲ್ಗೊಂಡಿತ್ತು. ಭಾರತೀಯ ರಾಯಭಾರಿ ಅವರ ನಿವಾಸದಲ್ಲಿ ಈ ಔತಣ ಕೂಟ ಏರ್ಪಡಿಸಲಾಗಿತ್ತು.
ನಾಳೆಯಿಂದ ವಿಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಭಾರತ 318 ರನ್ ಗಳಿಂದ ಗೆದ್ದುಕೊಂಡು ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಶುಭಾರಂಭ ಮಾಡಿತ್ತು.