Publish Date: Wed, 28 Aug 2019 (10:11 IST)
Updated Date: Wed, 28 Aug 2019 (10:14 IST)
ಆಂಟಿಗುವಾ: ಟಿ20, ಏಕದಿನ ನಂತರ ಇದೀಗ ಟೆಸ್ಟ್ ಪಂದ್ಯದಲ್ಲೂ ವಿಫಲವಾದ ಬಳಿಕ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ರನ್ನು ತಂಡದಿಂದ ಕಿತ್ತು ಹಾಕಲು ಒತ್ತಾಯ ಕೇಳಿಬರತೊಡಗಿದೆ.
ಕೀಪಿಂಗ್ ಜತೆಗೆ ಬ್ಯಾಟಿಂಗ್ ನಲ್ಲೂ ರಿಷಬ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಮುಂದಿನ ಪಂದ್ಯಕ್ಕೆ ರಿಷಬ್ ಪಂತ್ ಗೆ ಕೊಕ್ ನೀಡಿ ಮತ್ತೆ ವೃದ್ಧಿಮಾನ್ ಸಹಾಗೇ ಅವಕಾಶ ನೀಡಬೇಕೆಂದು ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಒತ್ತಾಯಿಸಿದ್ದಾರೆ.
ಕಿರ್ಮಾನಿ ಮಾತ್ರವಲ್ಲ, ರಿಷಬ್ ರ ಪ್ರದರ್ಶನ ನೋಡಿ ಈಗ ಅವರನ್ನು ತಂಡದ ಆಡುವ ಬಳಗದಲ್ಲಿ ಉಳಿಸಿಕೊಳ್ಳುವುದರ ಬಗ್ಗೆ ಪ್ರಶ್ನೆಗಳು ಕೇಳಿಬರಲಾರಂಭಿಸಿದೆ. ಹೀಗಾಗಿ ರಿಷಬ್ ರನ್ನು ಮುಂದಿನ ಪಂದ್ಯದಿಂದ ಕಿತ್ತು ಹಾಕಿದರೂ ಅಚ್ಚರಿಯಿಲ್ಲ.